ನನ್ನ ಜೈಲಿಗೆ ಹಾಕಿದ್ರೂ ಸರಿಯೇ ಪಾದಯಾತ್ರೆ ನಿಲ್ಲಿಸೋದಿಲ್ಲ : ಡಿಕೆ ಶಿ – Vishwanews24

Featured, ರಾಜ್ಯ ನ್ಯೂಸ್

ನನ್ನ ಜೈಲಿಗೆ ಹಾಕಿದ್ರೂ ಸರಿಯೇ ಪಾದಯಾತ್ರೆ ನಿಲ್ಲಿಸೋದಿಲ್ಲ : ಡಿಕೆ ಶಿ – Vishwanews24

ರಾಮನಗರ: ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವಂತ ಪಾದಯಾತ್ರೆ ನಿಲ್ಲಿಸೋದಿಲ್ಲ. ನೂರಕ್ಕೆ ನೂರರಷ್ಟು ಪಾದಯಾತ್ರೇ ಮಾಡೇ ಮಾಡುತ್ತೇವೆ. ಅವರು ನನ್ನ ಜೈಲಿಗೆ ಹಾಕಿದ್ರೂ ಸರಿಯೇ ಪಾದಯಾತ್ರೆ ನಿಲ್ಲಿಸೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಕೋವಿಡ್ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಮೇಕೆದಾಟು ಪಾದಯಾತ್ರೆ ಮಾಡಲಾಗುತ್ತದೆ. ಬಿಜೆಪಿಯವರು ನಮ್ಮ ವಿರುದ್ಧ ನ್ಯೂಸ್ ಮಾಡೋದಕ್ಕೆ ಪೋನ್ ಮಾಡಿ ಪೋನ್ ಮಾಡಿ ನ್ಯೂಸ್ ಚಾನಲ್ ಗಳಿಗೆ ಹೇಳುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸೋದಿಲ್ಲ. ನಮ್ಮ ಬಂಧಿಸಿ, ಶರ್ಟ್, ಪ್ಯಾಂಟ್ ಬಿಚ್ಚಿ ಜೈಲಲ್ಲಿ ಕೂರಿಸಿದ್ರೂ ಸರಿಯೇ ಎಂದರು.

 

ಜಿಲ್ಲೆಯಲ್ಲಿ ಜನವರಿ 10 ರಿಂದ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ -Vishwanews24

 

 

Leave a Reply