ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ , ನನಗೆ ಯಾವುದೇ ಪಶ್ಚಾತ್ತಾಪವಿಲ್ಲ : ಸಾಹಿಲ್ – Vishwanews24

Featured, ರಾಷ್ಟ್ರ ನ್ಯೂಸ್

ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ , ಯಾವುದೇ ಪಶ್ಚಾತ್ತಾಪವಿಲ್ಲ : ಸಾಹಿಲ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 16 ವರ್ಷದ ಹುಡುಗಿಯನ್ನು ಚುಚ್ಚಿ, ಚುಚ್ಚಿ ಕೊಲೆಗೈದ ಪ್ರಕರಣ ಸಂಬಂಧ ಇದೀಗ ಆರೋಪಿ ಸಾಹಿಲ್  ಪೊಲೀಸರ ಮುಂದೆ ಕೊಲೆಗೆ ಕಾರಣವೇನು ಎಂಬುದನ್ನು ಬಾಯ್ಬಿಟ್ಟಿದ್ದಾನೆ.

ಪ್ರಕರಣ ಸಂಬಂಧ ಸೋಮವಾರ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ 20 ವರ್ಷದ ಸಾಹಿಲ್‍ನನ್ನು ಬಂಧಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದಾಗ, ಆಕೆಯನ್ನು ಕೊಂದಿದ್ದಕ್ಕೆ ನನಗೆ ಪಶ್ಚಾತ್ತಾಪವಿಲ್ಲ. ಯಾಕಂದ್ರೆ ಆಕೆ ನನ್ನನ್ನು ತಿರಸ್ಕರಿಸಿದ್ದಾಳೆ. ಹೀಗಾಗಿ ಕೋಪದ ಭರದಲ್ಲಿ ಕೊಲೆ ಮಾಡಿದೆ ಎಂದು ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಆಕೆ ತನ್ನೊಂದಿಗೆ ಬ್ರೇಕ್ ಅಪ್  ಮಾಡಲು ಬಯಸಿದ್ದಳು. ಅಲ್ಲದೆ ಬೇರೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆಕೆಯ ಗೆಳೆಯ ನನ್ನ ಮೇಲೆ ಗೂಂಡಾಗರಿ ನಡೆಸಿದ್ದಾನೆ. ಅಲ್ಲದೆ ಇನ್ನು ಮುಂದೆ ತೊಂದರೆ ಕೊಟ್ಟರೆ ಪೊಲೀಸರಿಗೆ ದೂರು ನೀಡುವುದಾಗಿ ಆಕೆ ಬೆದರಿಸಿದ್ದಳು ಎಂದು ಸಾಹಿಲ್ ಹೇಳಿದ್ದಾನೆ.

ಹುಡುಗಿ ಆತನನ್ನು ಬೆದರಿಸಲು ಆಟಿಕೆ ಪಿಸ್ತೂಲ್ ಕೂಡ ಬಳಸಿದ್ದಳು. ಹತ್ಯೆಯ ಹಿಂದಿನ ದಿನ ಇಬ್ಬರೂ ಜಗಳವಾಡಿದ್ದರು. ಕೊಲೆ ಮಾಡುವ ಸಂದರ್ಭದಲ್ಲಿ ಸಾಹಿಲ್ ಕುಡಿದಿದ್ದ ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ : ಯುವತಿ ನಾಪತ್ತೆ – Vishwanews24

ಭಾನುವಾರ ಸಂಜೆ, ಮೃತ ಹುಡುಗಿ ಸಾಕ್ಷಿ ಸ್ನೇಹಿತನ ಮಗನ ಹುಟ್ಟುಹಬ್ಬದ ಪಾರ್ಟಿ ಗೆ ಹೋಗುತ್ತಿದ್ದಾಗ ಸಾಹಿಲ್ ಅವಳನ್ನು ಗೋಡೆಗೆ ಬಿಗಿ ಹಿಡಿದು ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆ ಕುಸಿದು ಬಿದ್ದಿದ್ದಾಳೆ. ಆದರೂ ಬಿಡದ ಸಾಹಿಲ್ ಆಕೆಯ ಮೇಲೆ 3-4 ಬಾರಿ ಕಲ್ಲು ಎತ್ತಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಎಲ್ಲಾ ದೃಶ್ಯ ಸ್ಥಳೀಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ಉಡುಪಿ : ಯುವತಿ ನಾಪತ್ತೆ – Vishwanews24

Leave a Reply