ನಮ್ಮ ನಾಯಕರನ್ನು ಬಂಧಿಸಿ ಎಷ್ಟೇ ಕಿರುಕುಳ ಕೊಟ್ಟರೂ ನಾವು ಎದೆಗುಂದುವುದಿಲ್ಲ, ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ : ಸಿ.ಎಂ.ಇಬ್ರಾಹಿಂ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು,:ಚೆಂಡನ್ನು ಎಷ್ಟು ಜೋರಾಗಿ ನೆಲಕ್ಕೆ ಬಡಿದರೆ ಅಷ್ಟೇ ಜೋರಾಗಿ ಪುಟಿದೇಳುತ್ತದೆ. ಕಾಂಗ್ರೆಸ್ ಪಕ್ಷ ಕೂಡ ಹಾಗೆ ಎಂದು ಪಕ್ಷದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ

ವಿನಾಶಕಾಲಕ್ಕೆ ವಿಪರೀತ ಬುದ್ದಿ ಎಂಬಂತೆ ಬಿಜೆಪಿ ನಡೆದುಕೊಳ್ಳುತ್ತಿದೆ. ನಾಯಕರುಗಳನ್ನು ಬಂಧಿಸಿ ಕಾಂಗ್ರೆಸ್‍ನ್ನು ನಾಶ ಮಾಡಬಹುದು ಎಂಬ ಹಗಲುಗನಸು ಕಾಣುತ್ತಿದೆ ಎಂದರು.

ಗಣೇಶ ಹಬ್ಬದಂದು ಹಿರಿಯರಿಗೆ ಎಡೆ ಹಾಕಲೂ ಬಿಡದೆ ಅಮಾನವೀಯವಾಗಿ ವರ್ತಿಸಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಅವರ ಬೆಂಬಲಕ್ಕಿದೆ ಎಂದು ಕಿಡಿಕಾರಿದರು.  ಚೆಂಡನ್ನು ಎಷ್ಟು ಜೋರಾಗಿ ನೆಲಕ್ಕೆ ಬಡಿದರೆ ಅಷ್ಟೇ ಜೋರಾಗಿ ಪುಟಿದೇಳುತ್ತದೆ. ಕಾಂಗ್ರೆಸ್ ಪಕ್ಷ ಕೂಡ ಹಾಗೆ. ನೀವು ನಮ್ಮ ನಾಯಕರನ್ನು ಬಂಧಿಸಿ ಎಷ್ಟೇ ಕಿರುಕುಳ ಕೊಟ್ಟರೂ ನಾವು ಎದೆಗುಂದುವುದಿಲ್ಲ. ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದರು.