ನಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಈ ರಾಜ್ಯವನ್ನು ರಾಮರಾಜ್ಯ ಮಾಡುತ್ತೇನೆ : ಕುಮಾರಸ್ವಾಮಿ – Vishwanews24
ನಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಈ ರಾಜ್ಯವನ್ನು ರಾಮರಾಜ್ಯ ಮಾಡುತ್ತೇನೆ : ಕುಮಾರಸ್ವಾಮಿ
ಬಾದಾಮಿ: ಐದು ವರ್ಷದ ಅವಧಿಗೆ ನಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಈ ರಾಜ್ಯವನ್ನು ರಾಮರಾಜ್ಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ತಾಲೂಕಿನ ಕುಳಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣ ಅಧಿಕಾರ ನೀಡಿದರೆ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದ ಉಚಿತ ಶಿಕ್ಷಣ. ಪ್ರತಿ ಗ್ರಾಮದಲ್ಲಿ ಉಚಿತ ಆರೋಗ್ಯ, ರೈತರಿಗೆ ಎಕರೆಗೆ 10 ಸಾವಿರ, ಪ್ರತಿ ವರ್ಷ ರೈತರು ಎಲ್ಲಿಯೂ ಸಾಲ ಪಡೆಯಬೇಕಿಲ್ಲ.
ದಿನಕ್ಕೆ 24 ಗಂಟೆ ಉಚಿತ ವಿದ್ಯುತ್ ನೀಡುತ್ತೇವೆ ಎಂದರು. ಈಗಾಗಲೇ ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ಮಾಜಿ ಶಾಸಕರ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನಿಂದ ರೈತರ ಮೇಲೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದರೆ ಆ ಸಹಕಾರಿ ಬ್ಯಾಂಕ್ ತನಿಖೆ ಮಾಡಿಸಿ, ಅದನ್ನು ಮುಚ್ಚಿಸುವ ಕೆಲಸ ಮಾಡುತ್ತೇವೆ. ಪ್ರತಿ ಮನೆಗೆ 5 ಸಾವಿರ ಕೊಡುತ್ತೇವೆ. ನದಿ ತೀರದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಮೂಲಭೂತ ಸೌಕರ್ಯ ಒದಗಿಸುತ್ತೇವೆ. ಈ ಬಾರಿ ಹನಮಂತ ಮಾವಿನಮರದಗೆ ಆಶೀರ್ವಾದ ಮಾಡಿ. ಬಾದಾಮಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ, ಕಾಂಕ್ರಿಟ್ ರಸ್ತೆ, ಒಳಚರಂಡಿ, ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದರು.
ಚುನಾವಣೆಯಲ್ಲಿ ಮತ ಪಡೆದು ಸಿದ್ದರಾಮಯ್ಯ ಹಾಗೂ ಶ್ರೀರಾಮಲು ಈ ಭಾಗಕ್ಕೆ ಬಂದು ಜನರ ಕಷ್ಟಸುಖ ಕೇಳಲಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜನರ ಕಷ್ಟ ಪರಿಹಾರವಾಗಿಲ್ಲ. ಒಬ್ಬ ಎಂಎಲ್‌ಎ ಮನೆಯಲ್ಲಿ 8 ಕೋಟಿ ಸಿಗುತ್ತೆ ಅಂದ್ರೆ ನೀವು ಯೋಚನೆ ಮಾಡಿ. ಅಂತಹ ದುಡ್ಡಿನಿಂದ ನಿಮಗೆ ಕುಕ್ಕರ್ ಹಂಚುತ್ತಾರೆ. ಆಮಿಷಗಳಿಗೆ ಬಲಿಯಾಗಬೇಡಿರಿ ಎಂದು ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು.
ಮುಸ್ಲಿಂ ರಾಜ ಶ್ರೀ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಉಡುಪಿಯಲ್ಲಿ ಅಲ್ಲ, ಗಂಗಾ ತೀರದಲ್ಲಿ : ಪೇಜಾವರ ಶ್ರೀ ಸ್ಪಷ್ಟನೆ
