ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ : ಸಿಎಂ ಡಿ.ಕೆ. ಶಿ – vishwanews24

Featured, ರಾಜ್ಯ ನ್ಯೂಸ್

ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ ..

ನಾಗೇಂದ್ರ ಅವರ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ ರಾಜ್ಯದ ಜನತೆಗೆ ತೀವ್ರ ನೋವುಂಟುಮಾಡಿದೆ : ಡಿ.ಕೆ. ಶಿ ಆಕ್ರೋಶ 

ಬೆಂಗಳೂರು: ನಾಗೇಂದ್ರ ಸಂಪೂರ್ಣ ನಿರಪರಾಧಿಯಾಗಿದ್ದು, ಅವರ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ ರಾಜ್ಯದ ಜನತೆಗೆ ತೀವ್ರ ನೋವುಂಟುಮಾಡಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾನೇ ಖುದ್ದಾಗಿ ಈ ಪ್ರಕರಣದ ಎಲ್ಲಾ ವರದಿಗಳನ್ನು ಪರಿಶೀಲನೆ ನಡೆಸಿದ್ದೇನೆ, ಸಂಬಂಧಪಟ್ಟವರೊಂದಿಗೆ ಚರ್ಚಿಸಿದ್ದೇನೆ. ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ” ಎಂದರು.

ಕಟೀಲು  ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ – vishwanews24

“4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಒಬ್ಬ ದಲಿತ ನಾಯಕನನ್ನು ಬಲವಂತವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಇದು ಕೇವಲ ನಾಗೇಂದ್ರ ಅವರಿಗೆ ಮಾಡಿದ ಅವಮಾನವಲ್ಲ, ರಾಜ್ಯದ ಬಡವರು ಹಾಗೂ ಸಾರ್ವಜನಿಕರ ಮನಸ್ಸಿಗೆ ಭಾರಿ ನೋವುಂಟುಮಾಡಿದೆ” ಎಂದು ಹೇಳಿದರು.

“ಸರ್ಕಾರವಾಗಲಿ ಅಥವಾ ನಮ್ಮ ಪಕ್ಷವಾಗಲಿ ಯಾವುದೇ ಕಾರಣಕ್ಕೂ ಮಣಿದಿಲ್ಲ. ನಾಗೇಂದ್ರ ಅವರು ನಮ್ಮ ಪಕ್ಷದ ನಿಷ್ಠಾವಂತ ನಾಯಕ ಹಾಗೂ ಕಾರ್ಯಕರ್ತ. ತಮ್ಮ ಮೇಲಿನ ಆರೋಪಗಳಿಂದ ಸರ್ಕಾರ ಮತ್ತು ಪಕ್ಷಕ್ಕೆ ಯಾವುದೇ ಮುಜುಗರ ಉಂಟಾಗಬಾರದು ಎಂಬ ಒಂದೇ ಕಾರಣಕ್ಕೆ ಅವರು ಸ್ವಯಂಪ್ರೇರಿತರಾಗಿ ಈ ನಿರ್ಧಾರ ತಳೆದಿದ್ದಾರೆ” ಎಂದು ತಿಳಿಸಿದರು.

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 626 ಕ್ಕೆ ಏರಿಕೆ , 2500ಕ್ಕೂ ಹೆಚ್ಚು ಮಂದಿ ನಾಪತ್ತೆ – vishwanews24

Leave a Reply