ನಾನು ಈ ಬಾರಿ ಸ್ಪರ್ಧಿಸುವುದಿಲ್ಲ, ಕುಟುಂಬದವರಿಗೂ ಟಿಕೆಟ್ ಬೇಡ : ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ – Vishwanews24

Featured, ರಾಜ್ಯ ನ್ಯೂಸ್

ಈ ಬಾರಿ ನಾನು ಸ್ಪರ್ಧಿಸುವುದಿಲ್ಲ, ಕುಟುಂಬದವರಿಗೂ ಟಿಕೆಟ್ ಬೇಡ : ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್

ದಾವಣಗೆರೆ: ಜಿಲ್ಲೆಯ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಗೆದ್ದು, ಶಾಸಕರಾಗಿದ್ದಂತ ಎಸ್ ಎ ರವೀಂದ್ರನಾಥ್ ಈಗಾಗಲೇ ಚುನಾವಣ ಕಣದಿಂದ ಹಿಂದೆ ಸರಿದಿದ್ದರು. ಈ ಬೆನ್ನಲ್ಲೇ ನಾನು ನಿಲ್ಲುವುದಿಲ್ಲ, ನನ್ನ ಕುಟುಂಬಸ್ಥರಿಗೂ ಟಿಕೆಟ್ ಬೇಡ ಎಂಬುದಾಗಿ ಪಕ್ಷ ನಿಷ್ಠೆಯನ್ನು ಮೆರೆದಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಮೇಲೆ ಈ ಬಾರಿಯೂ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಡವಿದೆ. ಆದ್ರೇ ನಾನು ಆರೋಗ್ಯ ಸರಿಯಿಲ್ಲದ ಕಾರಣ ಸ್ವ ಇಚ್ಛೆಯಿಂದ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಮತ್ತೊಮ್ಮೆ ಸ್ಪಷ್ಟ ಪಡಿಸಿದರು.

ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಕುಟುಂಬಸ್ಥರಿಗೂ ಟಿಕೆಟ್ ಗಾಗಿ ಯಾವುದೇ ಲಾಭಿ ನಡೆಸಿಲ್ಲ. ನನಗೂ ಬೇಡ, ನನ್ನ ಮಕ್ಕಳಿಗೂ ಟಿಕೆಟ್ ಬೇಡ ಎಂಬುದಾಗಿ ತಿಳಿಸಿದರು.

ಉಡುಪಿ: ಮೂರು ಬಾರಿ ಶಾಸಕನಾಗಿದ್ದೇನೆ ಯಾವತ್ತೂ ಸೋತಿಲ್ಲ ; ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇನೆ : ರಘುಪತಿ ಭಟ್ – Vishwanews24

ಅಂದಹಾಗೇ ದಾವಣಗೆರೆ ಉತ್ತ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಗೆ ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಪುತ್ರ ಎಸ್ ಆರ್ ಬಸವರಾಜ್ ಶಿಗಮಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದಾರೆ. ಇಬ್ಬರು ಪುತ್ರಿಯರಲ್ಲಿ ಓರ್ವ ಪುತ್ರಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆಯಾಗಿದ್ದರೇ, ಮತ್ತೋರ್ವ ಪುತ್ರಿ ಹಾಲಿ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದಾರೆ. ಹೀಗಿದ್ದೂ ಕುಟುಂಬದವರಿಗೆ, ಮಕ್ಕಳಿಗೆ ಟಿಕೆಟ್ ಬೇಡವೆಂದು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.

Leave a Reply