ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ – vishwanews24

Featured, ರಾಜ್ಯ ನ್ಯೂಸ್

ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ

ಮೈಸೂರು: “ನಾನು ಕಂಬಳವನ್ನು ವಿರೋಧಿಸುತ್ತಿಲ್ಲ. ಅದು ನಮ್ಮ ರಾಜ್ಯದ ಹೆಮ್ಮೆ. ಆದರೆ, ಮೈಸೂರಿನ ಜನತೆಯ ಭಾವನೆಯನ್ನು ಪ್ರತಿಧ್ವನಿಸುವ ನನ್ನ ನಿರಂತರ ನಿಲುವೇನೆಂದರೆ, ಈ ಸಾಂಪ್ರದಾಯಿಕ ಕ್ರೀಡೆಗೆ ಅದರದ್ದೇ ಆದ ಮೂಲ ನೆಲದಲ್ಲಿ ಗರಿಷ್ಠ ಉತ್ತೇಜನ ಮತ್ತು ಆಚರಣೆಯ ಗೌರವ ಸಿಗಬೇಕೇ ಹೊರತು, ಈಗಾಗಲೇ ತೀವ್ರ ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿರುವ ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು’ ಎಂದು ಮೈಸೂರು ರಾಜವಂಶಸ್ಥ ಮತ್ತು ಸಂಸದ ಯದುವೀರ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ದಸರಾದಲ್ಲಿ ಕಂಬಳ ಸೇರ್ಪಡೆ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಎಕ್ಸ್ ಪೋಸ್ಟ್ ಮಾಡಿರುವ ಯದುವೀರ್ ಅವರು ಶುಕ್ರವಾರ ನಡೆದ ಸಭೆಯಲ್ಲಿ ಕಂಬಳದ ಸೇರ್ಪಡೆಯನ್ನು ಪ್ರಶ್ನಿಸಿದೆ ಮತ್ತು ಮರುಪರಿಶೀಲಿಸುವಂತೆ ಅಧಿಕೃತವಾಗಿ ವಿನಂತಿಸಿದೆ. ಈ ವಿಷಯದಲ್ಲಿ ನಾನು ಒಬ್ಬಂಟಿಯಾಗಿರಲಿಲ್ಲ. ಇತರ ಹಲವಾರು ನಾಯಕರು ಮತ್ತು ಸಮಿತಿಯ ಸದಸ್ಯರು ಸಹ ಇದೇ ರೀತಿಯ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ – vishwanews24

ಕಂಬಳದ ಸೇರ್ಪಡೆಗಾಗಿ ತೀವ್ರವಾಗಿ ಒತ್ತಾಯಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ನನ್ನ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ತೀವ್ರ ವಿಷಾದನೀಯ. ನಮ್ಮ ರಾಜ್ಯ ಹಬ್ಬಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿಯ ನಡಾವಳಿಗಳನ್ನು ಒಬ್ಬ ಜನಪ್ರತಿನಿಧಿಯು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸುವುದು ಅವರ ಸ್ಥಾನಕ್ಕೆ ತಕ್ಕುದಲ್ಲದ ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ನಡವಳಿಕೆಯಾಗಿದೆ” ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಗಂಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ‘ನಾಡಹಬ್ಬ ದಸರಾ – 2026’ ಆಚರಣೆಗೆ ಸಂಬಂಧಿಸಿ ಪೂರ್ವಭಾವಿ ಸಭೆ ನಡೆಸಿ ಹಲವು ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸಲಾಗಿದ್ದು ಕಂಬಳದ ವಿಚಾರವು ಚರ್ಚೆಗೆ ಬಂದಿದೆ. ಸದ್ಯ ಕಂಬಳ
ಆಯೋಜನೆ ವಿಚಾರ ಜಟಾಪಟಿಗೆ ಕಾರಣವಾಗಿದೆ.

ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ – vishwanews24

Leave a Reply