ನಾನು ನಿಮಗೆ ರಕ್ತದಲ್ಲಿ ಬರೆದುಕೊಡ್ತೀನಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ : ಡಿ.ಕೆ ಶಿ ಶಪಥ – Vishwanews24
ನಾನು ನಿಮಗೆ ರಕ್ತದಲ್ಲಿ ಬರೆದುಕೊಡ್ತೀನಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ
ಈ ಬಾರಿ ಬಿಜೆಪಿ 40 ಪರ್ಸೆಂಟ್ನಂತೆ 40 ಸೀಟುಗಳನ್ನ ಗೆಲ್ಲಲಿದೆ..
ಮೇ 13 ತಾರೀಖು ಬಿಜೆಪಿಯ ಶವ ಆಚರಣೆ ಆಗಲಿದೆ..
ಮೈಸೂರು: ನಾನು ನಿಮಗೆ ರಕ್ತದಲ್ಲಿ ಬರೆದುಕೊಡ್ತೀನಿ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ಮಾಡುತ್ತೆ. ಬಿಜೆಪಿ 40 ಸೀಟಿಗೆ ನಿಲ್ಲುತ್ತದೆ. ನಾವು 150 ಸೀಟು ಗೆದ್ದೇ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಪಥ ಮಾಡಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, `ಬಿಜೆಪಿ ಅಧಿಕಾರಕ್ಕೆ ಬರುತ್ತೆ, ರಕ್ತದಲ್ಲಿ ಬರೆದುಕೊಡ್ತೀನಿ’ ಎಂಬ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ಬಿಜೆಪಿ 40 ಪರ್ಸೆಂಟ್ನಂತೆ 40 ಸೀಟುಗಳನ್ನ ಗೆಲ್ಲಲಿದೆ ಎಂದು ಕುಟುಕಿದ್ದಾರೆ.
ಕಾಪು : ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಪೂರ್ಣ ಜನ ಬೆಂಬಲ : ಸಚಿವ ಕೋಟ – Vishwanews24
ಡಬಲ್ ಎಂಜಿನ್ ಸರ್ಕಾರದ ಮೀಸಲಾತಿಯ ಮೋಸದಾಟ ಬಯಲಾಗಿದೆ. ಬಿಜೆಪಿ ವಿಶ್ವಾಸ ದ್ರೋಹಿ ಪಾರ್ಟಿ ಅನ್ನೋದು ಸುಪ್ರೀಂ ಕೋರ್ಟ್ನಲ್ಲಿ ತಿಳಿದಿದೆ. ಚುನಾವಣಾ ವೇಳೆ ಜೇನುಗೂಡಿಗೆ ಕೈ ಹಾಕಿ ಮೋಸ ಮಾಡಿದ್ದಾರೆ. ಮೃತ್ಯುಂಜಯ ಸ್ವಾಮೀಜಿಗಳು ಹೇಳಿದಂತೆ ತಲೆ ಮೇಲೆ ತುಪ್ಪ ಇಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ
ಅಮಿತ್ ಶಾ ಅವರೇ ನಿಮಗೆ ಬದ್ಧತೆ ಇದೆಯೇ? ಮೋಸ ಮಾಡಿಕೊಂಡು ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದೀರಾ? ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಾ? ನೀವು ಲಿಂಗಾಯತರು, ಒಕ್ಕಲಿಗರಿಗೆ ಕೊಟ್ಟಿರೋ 2 ಪರ್ಸೆಂಟ್ ವಿತ್ ಡ್ರಾ ಆಗಿದೆ.
