Featured

ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ , ನುಡಿದಂತೆ ನಡೆಯುತ್ತೇನೆ : ಸಿಎಂ  ಡಿಕೆ ಶಿ – vishwanews24

ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ಅಭಿವೃದ್ಧಿ ಮಾಡುತ್ತೇವೆ..

ಮುಂದಿನ ಬಾರಿ ಮತ್ತೇ ನಮ್ಮದೇ ಸರ್ಕಾರ ಗ್ಯಾರಂಟಿ: ಸಿಎಂ  ಡಿಕೆ ಶಿ

ಚಿತ್ರದುರ್ಗ: ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ, ನಾನು ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹಿರಿಯೂರು ತಾಲೂಕಿನಲ್ಲಿ 2,328 ಕೋಟಿ ರೂ. ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಕೊಟ್ಟಾಗ ವಿರೋಧ ಪಕ್ಷದವರು ನಕ್ಕರು. ಆದರೆ ನಮ್ಮ ಸರ್ಕಾರ ಯಶಸ್ವಿಯಾಗಿ ಗ್ಯಾರಂಟಿ ಕೊಟ್ಟಿದೆ. ಎಲ್ಲಾ ತಾಯಂದಿರು ಉಚಿತವಾಗಿ ಓಡಾಡುತಿದ್ದಾರೆ. 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ. ಈ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕನಕಪುರದಷ್ಟೇ ಮುಖ್ಯ ಹಿರಿಯೂರು ಕ್ಷೇತ್ರ. ಹಿರಿಯೂರು ಉಪ ಚುನಾವಣೆಯಲ್ಲಿ ಅವರು ಇಬ್ಬರು ಸೇರಿ ಮೈತ್ರಿ ಮಾಡಿಕೊಂಡು ಒಂದೇ ಅಭ್ಯರ್ಥಿ ನಿಲ್ಲಿಸುತ್ತಾರೆ ಎಂದು ನನಗೆ ಗೊತ್ತಿದೆ. ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ಅಭಿವೃದ್ಧಿ ಮಾಡುತ್ತೇವೆ. ನೀವು ನನ್ನ ಕೈ ಹಿಡಿಯುತ್ತೀರಲ್ಲಾ? ನನಗೆ ಮೋಸ ಮಾಡಲ್ವಲ್ಲಾ ಎಂದು ಜನತೆಗೆ ಪ್ರಶ್ನಿಸಿದರು.

ಇದನ್ನೂ ಓದಿ: 

ಈ ಕಾರ್ಯಕ್ರಮಕ್ಕೆ ಬಹಳ ದುಃಖದಿಂದ ಬಂದಿದ್ದೇನೆ. ಇವತ್ತು ಡಿ.ಸುಧಾಕರ್ ಇದ್ದಿದ್ದರೆ ಸಂತೋಷ, ಆನಂದ ಪಡುತ್ತಿದ್ದ. ತಾನು ಮಂತ್ರಿ ಆಗದಿದ್ದರೂ ಪರವಾಗಿಲ್ಲ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಎಲ್ಲರ ಮುಂದೆ ಘೋಷಣೆ ಮಾಡಿದ್ದ. ನಾನು ಬರಿಗೈಯಲ್ಲಿ ಇಲ್ಲಿಗೆ ಬಂದಿಲ್ಲ, ಅಭಿವೃದ್ಧಿ ಲಕ್ಷ್ಮೀಯನ್ನು ತೆಗೆದುಕೊಂಡು ಬಂದಿದ್ದೇವೆ. 2,300 ಕೋಟಿ ರೂ. ಅಭಿವೃದ್ಧಿ ಕೆಲಸದ ಹಣ ಬಿಡುಗಡೆ ಮಾಡಿ ಬಂದಿದ್ದೇವೆ. ಈಗ ಪ್ರತಿಯೊಂದು ಊರಲ್ಲಿ, ಹಳ್ಳಿಯಲ್ಲಿ ಏನಾಗಬೇಕು ಎಂದು ಪಟ್ಟಿ ಮಾಡಿಕೊಂಡು ಕೆಲಸ ಆರಂಭಿಸಿದ್ದೇವೆ ಎಂದರು.

Vishwa News 24

Recent Posts

ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಮುಖ್ಯ ರಸ್ತೆ ಕಾಮಗಾರಿ ತಕ್ಷಣ ನಡೆಸಲು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ – vishwanews24

ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಮುಖ್ಯ ರಸ್ತೆ ಕಾಮಗಾರಿ ತಕ್ಷಣ ನಡೆಸಲು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ಉಡುಪಿ…

21 minutes ago

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ – vishwanews24

 ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ; ದೇವಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಮಂಗಳೂರು:…

47 minutes ago

ಒಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕ ಸಾವು ; 13 ಮಂದಿ ರಕ್ಷಣೆ – vishwanews24

ಒಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕ ಸಾವು ; 13 ಮಂದಿ ರಕ್ಷಣೆ ಮಸ್ಕತ್: ಒಮನ್ ಕರಾವಳಿಯಲ್ಲಿ…

3 hours ago

ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ : ಬಿ.ವೈ. ವಿಜಯೇಂದ್ರ – vishwanews24

ಆಕ್ರೋಶದಿಂದ ಮಾತನಾಡಿದ್ದೇನೆಯೇ ಹೊರತು ಉದ್ದೇಶಪೂರ್ವಕವಾಗಿರಲಿಲ್ಲ.. ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ .. ಕಾಂಗ್ರೆಸ್ ವಿರುದ್ಧ ಏಕವಚನ ಪದ…

3 hours ago

ನ.5ರಂದು ಬೆಂಗಳೂರಿನಲ್ಲಿ ಎಸ್ಐಆರ್ ವಿರುದ್ಧ ಇಂಡಿಯಾ ಒಕ್ಕೂಟದ ಬೃಹತ್ ಪ್ರತಿಭಟನೆ : ಬಿ.ಕೆ. ಹರಿಪ್ರಸಾದ್ – vishwanews24

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ.. ಜಿಲ್ಲಾ, ತಾಲ್ಲೂಕು ಮಟ್ಟದಲ್ಲೂ ಹೋರಾಟ ನಡೆಸಲು ನಿರ್ಧಾರ ಬೆಂಗಳೂರು: ಎಸ್ಐಆರ್…

3 hours ago

ಬೆಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ನಂದಿನಿ ಮೊಸರಿನ ದರ ಇಳಿಕೆಗೆ ಸಿಎಂ. ಸೂಚನೆ – vishwanews24

ಬೆಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ನಂದಿನಿ ಮೊಸರಿನ ದರ ಇಳಿಕೆಗೆ ಸಿಎಂ. ಸೂಚನೆ ಬೆಂಗಳೂರು: ನಂದಿನಿ ಹಾಲು ಮತ್ತು…

4 hours ago