ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ , ನುಡಿದಂತೆ ನಡೆಯುತ್ತೇನೆ : ಸಿಎಂ ಡಿಕೆ ಶಿ – vishwanews24
ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ಅಭಿವೃದ್ಧಿ ಮಾಡುತ್ತೇವೆ..
ಮುಂದಿನ ಬಾರಿ ಮತ್ತೇ ನಮ್ಮದೇ ಸರ್ಕಾರ ಗ್ಯಾರಂಟಿ: ಸಿಎಂ ಡಿಕೆ ಶಿ
ಚಿತ್ರದುರ್ಗ: ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ, ನಾನು ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಿರಿಯೂರು ತಾಲೂಕಿನಲ್ಲಿ 2,328 ಕೋಟಿ ರೂ. ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಕೊಟ್ಟಾಗ ವಿರೋಧ ಪಕ್ಷದವರು ನಕ್ಕರು. ಆದರೆ ನಮ್ಮ ಸರ್ಕಾರ ಯಶಸ್ವಿಯಾಗಿ ಗ್ಯಾರಂಟಿ ಕೊಟ್ಟಿದೆ. ಎಲ್ಲಾ ತಾಯಂದಿರು ಉಚಿತವಾಗಿ ಓಡಾಡುತಿದ್ದಾರೆ. 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ. ಈ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಕನಕಪುರದಷ್ಟೇ ಮುಖ್ಯ ಹಿರಿಯೂರು ಕ್ಷೇತ್ರ. ಹಿರಿಯೂರು ಉಪ ಚುನಾವಣೆಯಲ್ಲಿ ಅವರು ಇಬ್ಬರು ಸೇರಿ ಮೈತ್ರಿ ಮಾಡಿಕೊಂಡು ಒಂದೇ ಅಭ್ಯರ್ಥಿ ನಿಲ್ಲಿಸುತ್ತಾರೆ ಎಂದು ನನಗೆ ಗೊತ್ತಿದೆ. ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ಅಭಿವೃದ್ಧಿ ಮಾಡುತ್ತೇವೆ. ನೀವು ನನ್ನ ಕೈ ಹಿಡಿಯುತ್ತೀರಲ್ಲಾ? ನನಗೆ ಮೋಸ ಮಾಡಲ್ವಲ್ಲಾ ಎಂದು ಜನತೆಗೆ ಪ್ರಶ್ನಿಸಿದರು.
ಇದನ್ನೂ ಓದಿ:
ಒಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕ ಸಾವು ; 13 ಮಂದಿ ರಕ್ಷಣೆ – vishwanews24
ಈ ಕಾರ್ಯಕ್ರಮಕ್ಕೆ ಬಹಳ ದುಃಖದಿಂದ ಬಂದಿದ್ದೇನೆ. ಇವತ್ತು ಡಿ.ಸುಧಾಕರ್ ಇದ್ದಿದ್ದರೆ ಸಂತೋಷ, ಆನಂದ ಪಡುತ್ತಿದ್ದ. ತಾನು ಮಂತ್ರಿ ಆಗದಿದ್ದರೂ ಪರವಾಗಿಲ್ಲ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಎಲ್ಲರ ಮುಂದೆ ಘೋಷಣೆ ಮಾಡಿದ್ದ. ನಾನು ಬರಿಗೈಯಲ್ಲಿ ಇಲ್ಲಿಗೆ ಬಂದಿಲ್ಲ, ಅಭಿವೃದ್ಧಿ ಲಕ್ಷ್ಮೀಯನ್ನು ತೆಗೆದುಕೊಂಡು ಬಂದಿದ್ದೇವೆ. 2,300 ಕೋಟಿ ರೂ. ಅಭಿವೃದ್ಧಿ ಕೆಲಸದ ಹಣ ಬಿಡುಗಡೆ ಮಾಡಿ ಬಂದಿದ್ದೇವೆ. ಈಗ ಪ್ರತಿಯೊಂದು ಊರಲ್ಲಿ, ಹಳ್ಳಿಯಲ್ಲಿ ಏನಾಗಬೇಕು ಎಂದು ಪಟ್ಟಿ ಮಾಡಿಕೊಂಡು ಕೆಲಸ ಆರಂಭಿಸಿದ್ದೇವೆ ಎಂದರು.
