Featured

ಒಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕ ಸಾವು ; 13 ಮಂದಿ ರಕ್ಷಣೆ – vishwanews24

ಒಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕ ಸಾವು ; 13 ಮಂದಿ ರಕ್ಷಣೆ

ಮಸ್ಕತ್: ಒಮನ್ ಕರಾವಳಿಯಲ್ಲಿ ಭಾರತದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆದಿದೆ. ಪರಿಣಾಮ ಗುಜರಾತ್ ಮೂಲದ ಓರ್ವ ಭಾರತೀಯ ನಾವಿಕ ಸಾವನ್ನಪ್ಪಿದ್ದು, ಉಳಿದ 13 ಮಂದಿ ನಾವಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅವರು, “ಅಲ್ ಜುಸುಫಿ ಹೆಸರಿನ ಹಡಗು ಒಮನ್ ಕರಾವಳಿಯಲ್ಲಿ ಸಾಗುತ್ತಿದ್ದಾಗ ವೈಮಾನಿಕ ವಸ್ತುವೊಂದು ಹಡಗಿನ ಮೇಲೆ ದಾಳಿ ನಡೆಸಿದೆ. ಈ ಹಡಗಿನಲ್ಲಿ ಒಟ್ಟು 14 ಮಂದಿ ಭಾರತೀಯ ನಾವಿಕರಿದ್ದರು” ಎಂದು ತಿಳಿಸಿದ್ದಾರೆ.

“ನವೆಂಬರ್ 2ರಂದು ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಒಮನ್ ಕರಾವಳಿ ರಕ್ಷಣಾ ಪಡೆ 13 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ರಕ್ಷಿಸಿದೆ. ಆದರೆ, ಗುಜರಾತ್ ಮೂಲದ ಗಂಧರ್ ನಹೀಮ್ ಅಜೀಜ್ ಎಂಬ ನಾವಿಕ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ” ಎದು ಮಾಹಿತಿ ನೀಡಿದ್ದಾರೆ.

“ನಾವಿಕನ ಸಾವಿಗೆ ಸಚಿವ ಸರ್ಬಾನಂದ ಸೋನೋವಾಲ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತ ನಾವಿಕನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಸಂಕಷ್ಟದಲ್ಲಿರುವ ಉಳಿದ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.

“ಈ ಸಂಬಂಧ ಹಡಗು ಸಚಿವಾಲಯ ಮತ್ತು ಒಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ರಕ್ಷಿಸಲ್ಪಟ್ಟ 13 ಮಂದಿ ನಾವಿಕರಿಗೆ ತಕ್ಷಣದ ನೆರವು ಒದಗಿಸುವುದು ಹಾಗೂ ಅವರನ್ನು ಶೀಘ್ರವೇ ಭಾರತಕ್ಕೆ ವಾಪಸ್ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ. ಮೃತಪಟ್ಟ ನಾವಿಕನ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆಯನ್ನೂ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.

Vishwa News 24

Recent Posts

ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ , ನುಡಿದಂತೆ ನಡೆಯುತ್ತೇನೆ : ಸಿಎಂ  ಡಿಕೆ ಶಿ – vishwanews24

ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ಅಭಿವೃದ್ಧಿ ಮಾಡುತ್ತೇವೆ.. ಮುಂದಿನ ಬಾರಿ ಮತ್ತೇ ನಮ್ಮದೇ ಸರ್ಕಾರ ಗ್ಯಾರಂಟಿ: ಸಿಎಂ  ಡಿಕೆ ಶಿ…

5 minutes ago

ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ : ಬಿ.ವೈ. ವಿಜಯೇಂದ್ರ – vishwanews24

ಆಕ್ರೋಶದಿಂದ ಮಾತನಾಡಿದ್ದೇನೆಯೇ ಹೊರತು ಉದ್ದೇಶಪೂರ್ವಕವಾಗಿರಲಿಲ್ಲ.. ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ .. ಕಾಂಗ್ರೆಸ್ ವಿರುದ್ಧ ಏಕವಚನ ಪದ…

2 hours ago

ನ.5ರಂದು ಬೆಂಗಳೂರಿನಲ್ಲಿ ಎಸ್ಐಆರ್ ವಿರುದ್ಧ ಇಂಡಿಯಾ ಒಕ್ಕೂಟದ ಬೃಹತ್ ಪ್ರತಿಭಟನೆ : ಬಿ.ಕೆ. ಹರಿಪ್ರಸಾದ್ – vishwanews24

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ.. ಜಿಲ್ಲಾ, ತಾಲ್ಲೂಕು ಮಟ್ಟದಲ್ಲೂ ಹೋರಾಟ ನಡೆಸಲು ನಿರ್ಧಾರ ಬೆಂಗಳೂರು: ಎಸ್ಐಆರ್…

3 hours ago

ಬೆಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ನಂದಿನಿ ಮೊಸರಿನ ದರ ಇಳಿಕೆಗೆ ಸಿಎಂ. ಸೂಚನೆ – vishwanews24

ಬೆಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ನಂದಿನಿ ಮೊಸರಿನ ದರ ಇಳಿಕೆಗೆ ಸಿಎಂ. ಸೂಚನೆ ಬೆಂಗಳೂರು: ನಂದಿನಿ ಹಾಲು ಮತ್ತು…

3 hours ago

ಮುಂಬಯಿ-ಬೆಂಗಳೂರು ವಂದೇ ಭಾರತ್‌ : ಟಿಕೆಟ್‌ ದರ ಪ್ರಕಟ ; ಎಲ್ಲೆಲ್ಲಿ ನಿಲ್ದಾಣ? vishwanews24

ಮುಂಬಯಿ-ಬೆಂಗಳೂರು ವಂದೇ ಭಾರತ್‌ : ಟಿಕೆಟ್‌ ದರ ಪ್ರಕಟ ; ಎಲ್ಲೆಲ್ಲಿ ನಿಲ್ದಾಣ? ಮುಂಬಯಿ: ಬೆಂಗಳೂರು-ಮುಂಬಯಿ ವಂದೇ ಭಾರತ್ ಪರ್…

4 hours ago

ವಾಟ್ಸಾಪ್ ಬಳಕೆದಾರರೇ ಎಚ್ಚರ: ದೀಪಾವಳಿ ಆಫರ್ ಹೆಸರಿನಲ್ಲಿ ಸೈಬರ್ ವಂಚನೆ ಬಲೆ – vishwanews24

ವಾಟ್ಸಾಪ್ ಬಳಕೆದಾರರೇ ಎಚ್ಚರ: ದೀಪಾವಳಿ ಆಫರ್‌ಗಳ ಆಮಿಷಕ್ಕೆ ಬೀಳಬೇಡಿ; ನಕಲಿ ಸಂದೇಶಗಳ ಮೂಲಕ ಸೈಬರ್ ವಂಚಕರ ಜಾಲ ಸಕ್ರಿಯ  ದೀಪಾವಳಿ…

5 hours ago