ನಾನು ಮಾಂಸಹಾರಿ , ಮಾಂಸ ತಿನ್ನುವೆ ತಪ್ಪೇನು? ..ಇಂತಹದ್ದೇ ತಿನ್ನು ಎಂದು ದೇವರು ಹೇಳಿದ್ದಾರೆಯೇ?.. ಸಿದ್ದರಾಮಯ್ಯ – Vishwanews24
ನಾನು ಮಾಂಸಹಾರಿ , ಮಾಂಸ ತಿನ್ನುವೆ ತಪ್ಪೇನು? ..ಇಂತಹದ್ದೇ ತಿನ್ನು ಎಂದು ದೇವರು
ಹೇಳಿದ್ದಾರೆಯೇ?
ರಾತ್ರಿ ಮಾಂಸ ತಿಂದು ಬೆಳಿಗ್ಗೆ ದೇಗುಲಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ
ಹೋಗಬಾರದೆ..
ನಿಮ್ಮ ಆಹಾರ ಕ್ರಮ ನಿಮ್ಮದು, ನಮ್ಮ ಆಹಾರ ಕ್ರಮ ನಮ್ಮದು..
ಮೊಟ್ಟೆ ಎಸೆದ ವ್ಯಕ್ತಿ ಆರ್ಎಸ್ಎಸ್ನವನು. ಇದು ಸರ್ಕಾರಿ ಪ್ರಾಯೋಜಿತ ದಾಳಿ..
ಬಿಜೆಪಿಯವರು ಎಲ್ಲಿ ಚೆನ್ನಾಗಿದೆಯೊ ಅಲ್ಲಿ ವಿಷ ಹಾಕುವರು..
ಚಿಕ್ಕಬಳ್ಳಾಪುರ: ರಾತ್ರಿ ಮಾಂಸ ತಿಂದು ಬೆಳಿಗ್ಗೆ ದೇಗುಲಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ ಹೋಗಬಾರದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಡಿಕೇರಿಗೆ ಭೇಟಿ ವೇಳೆ ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಕ್ಕೆ ಉತ್ತರಿಸಿದ ಅವರು, ‘ನಾನು ಮಾಂಸಹಾರಿ. ಮಾಂಸ ತಿನ್ನುವೆ, ತಪ್ಪೇನು? ನಿಮ್ಮ ಆಹಾರ ಕ್ರಮ ನಿಮ್ಮದು, ನಮ್ಮ ಆಹಾರ ಕ್ರಮ ನಮ್ಮದು’. ಇಂತಹದ್ದೇ ತಿನ್ನು ಎಂದು ದೇವರು ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ. ಎಲ್ಲಿ ಚೆನ್ನಾಗಿದೆಯೊ ಅಲ್ಲಿ ವಿಷ ಹಾಕುವರು. ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರ ಎಂದು ಬಿಜೆಪಿಯವರು ಬಲವಂತವಾಗಿ ಹೇಳಿಸಿದ್ದಾರೆ. ಆತ ಆರ್ಎಸ್ಎಸ್ನವನು. ಇದು ಸರ್ಕಾರಿ ಪ್ರಾಯೋಜಿತ ದಾಳಿ ಎಂದು ಹೇಳಿದರು.
