ನಾನು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ ದೇವರು ಮೆಚ್ಚುವನು : ಸಿದ್ದರಾಮಯ್ಯ -Vishwanews24

Featured, ರಾಜ್ಯ ನ್ಯೂಸ್

ದೇವರು ಎಲ್ಲೆಲ್ಲೂ ಇದ್ದಾನೆ. ಎಲ್ಲರ ಒಳಗೂ ಇದ್ದಾನೆ..

ನಾನು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ ದೇವರು ಮೆಚ್ಚುವನು : ಸಿದ್ದರಾಮಯ್ಯ -Vishwanews24

ಹಾಸನ, (Vishwanews24) : ”ನಾನು ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗಲ್ಲ, ಯಾಕಂದ್ರೆ ದೇವರು ನನ್ನೊಳಗೆಯೇ ಇದ್ದಾನೆ. ನಾನು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ ದೇವರು ಮೆಚ್ಚುವನು” ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹುಲ್ಲೇನಹಳ್ಳಿ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿಯಾದರು.

”ದೇವರು ಎಲ್ಲೆಲ್ಲೂ ಇದ್ದಾನೆ. ಎಲ್ಲರ ಒಳಗೂ ಇದ್ದಾನೆ. ಈ ಕಾರಣದಿಂದಾಗಿ ಬಸವಾದಿ ಶರಣರು, ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂದಿದ್ದಾರೆ. ಆತ್ಮಶುದ್ದಿಯಿಂದ ದೇವರಿಗೆ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡುತ್ತಾನೆ. ನಾವು ದೇವರ ಕಣ್ಣು ತಪ್ಪಿಸಿ ಏನೂ ಮಾಡಲು ಆಗದು. ಧರ್ಮ ಎಂದರೆ ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ, ಒಳ್ಳೆಯದನ್ನು ಮಾಡುವುದು” ಎಂದು ಹೇಳಿದರು.

ಉಡುಪಿ : ದಯವಿಟ್ಟು ಎಲ್ಲರು ಕೊರೋನ ನಿಯಮಗಳನ್ನು ಪಾಲಿಸಿ ಇಲ್ಲದಿದ್ದಲ್ಲಿ ಲಾಕ್‌ಡೌನ್ ನಂತಹ ದೊಡ್ದ ಪೆಟ್ಟನ್ನು ಅನುಭವಿಸಬೇಕಾಗುತ್ತದೆ : ಜಿ. ಜಗದೀಶ್ ಮನವಿ -Vishwanews24