ನಾನು ಸಿಎಂ ಆಗಿದ್ದಾಗ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಂಡಿದ್ದೆ , ಮೈತ್ರಿ ಸರ್ಕಾರ ಉರುಳಲು ಡ್ರಗ್ ಮಾಫಿಯಾ ಕಾರಣ : ಕುಮಾರಸ್ವಾಮಿ -Vishwanews24
ನಾನು ಸಿಎಂ ಆಗಿದ್ದಾಗ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಂಡಿದ್ದೆ , ಮೈತ್ರಿ ಸರ್ಕಾರ ಉರುಳಲು ಡ್ರಗ್ ಮಾಫಿಯಾ ಕಾರಣ : ಕುಮಾರಸ್ವಾಮಿ -Vishwanews24
ತುರುವೇಕೆರೆ: ನನ್ನ ನೇತೃತ್ವದ ಮೈತ್ರಿ ಸರ್ಕಾರ ಉರುಳಲು ಡ್ರಗ್ ಮಾಫಿಯಾ ಕಾರಣ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಯಸಂದ್ರ ಹೋಬಳಿ ಗುಡ್ಡೇನಹಳ್ಳಿ ಜಮೀನಿನ ವಿಚಾರವಾಗಿ ವಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿಗೆ ಆಗಮಿಸಿದ್ದ ಅವರು, ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾನು ಸಿಎಂ ಆಗಿದ್ದಾಗ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಂಡಿದ್ದೆ. ನನ್ನ ಸರ್ಕಾರ ಬೀಳಿಸೋಕೆ ಡ್ರಗ್ ಮಾಫಿಯಾ ಹಣವನ್ನು ಬಿಜೆಪಿ ಬಳಸಿಕೊಂಡಿತ್ತು. ಕ್ರಿಕೆಟ್ ಬೆಟ್ಟಿಂಗ್, ಡಾನ್ಸ್ ಬಾರ್, ಪಬ್ಗಳ ಹಣ ಕೂಡ ಬಂದಿತ್ತು. ಇದನ್ನು ಬಳಸಿಕೊಂಡು ಮೈತ್ರಿ ಸರ್ಕಾರ ಕೆಡವಲಾಯಿತು ಎಂದು ಹರಿಹಾಯ್ದರು.
ಮಾಧ್ಯಮಗಳಲ್ಲಿ ಇಂತಹ ವಿಚಾರ ಹೆಚ್ಚು ಚರ್ಚೆ ಆಗಬಾರದು. ಇದು ಎಳೆಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು. ಈ ಹಗರಣದ ಹಿಂದೆ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಬೇಕು. ನಾನು ಚಿತ್ರರಂಗದಲ್ಲಿದ್ದಾಗ ಡ್ರಗ್ ಮಾಫಿಯಾ ಇರೋದು ನನಗೆ ಗೊತ್ತಿಲ್ಲ ಎಂದು ಹೇಳಿದರು. ತಹಸೀಲ್ದಾರ್ ನಯೀಂ ಉನ್ನೀಸಾಗೆ ಗುಡ್ಡೇನಹಳ್ಳಿ ಜಮೀನು ವಿಚಾರವಾಗಿ ರೈತರಿಗೆ ನ್ಯಾಯ ಕೊಡಿಸಲು ಮನವಿ ಸಲ್ಲಿಸಿದರು.
ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಚ್. ನಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ಮುಖಂಡರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್ಕೃಷ್ಣಪ್ಪ, ಕೋಳಾಲ ಗಂಗಾಧರ್, ಬಾಣಸಂದ್ರ ರಮೇಶ್, ವೆಂಕಟಾಪುರ ಯೋಗೀಶ್ ಇದ್ದರು. ಬಿಗಿ ಬಂದೋಬಸ್ತ್: ವಾಜಿ ಮುಖ್ಯಮಂತ್ರಿ ಕುವಾರಸ್ವಾಮಿ ಆಗಮನಕ್ಕೂ ಮುಂಚೆ ಜೆಡಿಎಸ್ನ ಸಾವಿರಾರು ಕಾರ್ಯಕರ್ತರು ವಾಯಸಂದ್ರ ರಸ್ತೆಯುದ್ದಕ್ಕೂ ನೆರೆದಿದ್ದರು. ಆದರೆ 144 ಸೆಕ್ಷನ್ ಇದ್ದಿದ್ದರಿಂದ ಕುವಾರಸ್ವಾಮಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕರ್ತ ಶರತ್ ಮನೆಯಲ್ಲಿ ಕಾಫಿ ಸೇವಿಸಿ ತೆರಳಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಿ ಭದ್ರತೆಗೆ ಪೊಲೀಸ್ ಬಂದೋಬಸ್ತ್ ವಾಡಲಾಗಿತ್ತು.
