ಕಿನ್ನಿಗೋಳಿ : ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ – Vishwanews24

Featured, ದಕ್ಷಿಣ ಕನ್ನಡ

ಕಿನ್ನಿಗೋಳಿ : ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಕಿನ್ನಿಗೋಳಿ: ನಾಪತ್ತೆಯಾಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾದ ಘಟನೆ ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿನಡೆದಿದೆ.

ಮೃತ ವ್ಯಕ್ತಿಯನ್ನು ಹೊಸಕಾವೇರಿ ನಿವಾಸಿ ಚಂದ್ರಕಾತ್ (40) ಎಂದು ಗುರುತಿಸಲಾಗಿದೆ.

ಚಂದ್ರಕಾಂತ್ ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದು ಇಂದು ಮಂಗಳವಾರ ಮದ್ಯಾಹ್ನ ಸಮೀಪದ ಹಳೆಯ ಕಪ್ಪುಕಲ್ಲಿನ ಕೋರೆಯಲ್ಲಿನ ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ.

ಇನ್ನು ಚಂದ್ರಕಾಂತ್ ಬಾವ ಕಳೆದ ಫೆಬ್ರವರಿಯಲ್ಲಿ ಮೃತರಾಗಿದ್ದರು ಈ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ಚಂದ್ರಕಾಂತ್ ತೀವ್ರ ಮನನೊಂದಿದ್ದರುಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಚಿತವಾಗಿ ನಿಮ್ಮ ಆಧಾರ್ ದಾಖಲೆಗಳನ್ನು ಅಪ್‌ಡೇಟ್ ಮಾಡಲು ನಾಳೆಯೇ ಕೊನೆ ದಿನ : ನಂತರ ಶುಲ್ಕ ಗ್ಯಾರೆಂಟಿ – Vishwanews24

Leave a Reply