ನಾಳೆ (ಅಗಸ್ಟ್ 01 ಶನಿವಾರ) ರಂದು ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ರಕ್ತದಾನ ಶಿಬಿರ -vishwanews24
*ನಾಳೆ (ಅಗಸ್ಟ್ 01 ಶನಿವಾರ) ರಂದು ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ರಕ್ತದಾನ ಶಿಬಿರ*
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಉಡುಪಿ ಶಾಖೆಯ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 01 ರಂದು ಶನಿವಾರ ಶಾಖೆಯಲ್ಲಿ ಸಮಯ :ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸತೀಶ್ ಸಾಲ್ಯಾನ್(ರಕ್ತದ ಆಪತ್ಬಾಂಧವ ಅಧ್ಯಕ್ಷರು ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್(ರಿ.)ಉಡುಪಿ) ಹಬೀಬ್ ಅಲಿ ಖಾದರ್ (ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತರು ಉಡುಪಿ) ಏರೋಲ್ ಗೋನ್ಸೆಲ್ವಸ್ (ಸಾಮಾಜಿಕ ಮಾಧ್ಯಮ ಇಂಪ್ಲಾನ್ಸರ್) ಡಾ. ವೀಣಾ ಕುಮಾರಿ (ರಕ್ತನಿಧಿ ಕೇಂದ್ರದ ಮುಖ್ಯಸ್ಥರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಉಡುಪಿ) ಹಾಗೂ ರಾಕೇಶ್ ಬಂಗೇರ ಪಲಿಮಾರು ,ಬದ್ರುದ್ದೀನ್ ಹೆಚ್ ಹೆಜಮಾಡಿ,ರೊಯ್ಸ್ ಉದ್ಯಾವರ,ರಫೀಕ್ ಕಲ್ಯಾಣಪುರ,ಉದಯ್ ಕರ್ಕೇರ ಪಿತ್ರೋಡಿ ಸನ್ಮಾನಿಸಿ ಗೌರವಿಸಲಾಗುವುದು .
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಈ ಮಹತ್ಕಾರ್ಯಕ್ಕೆ ಕೈ ಜೋಡಿಸ ಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
