Featured

ನಾವು ಎಲ್ಲರನ್ನೂ ಒಳಗೊಂಡ ಹಿಂದುತ್ವವನ್ನು ನಂಬುತ್ತೇವೆ , ಆದರೆ ಬಿಜೆಪಿ ವಿಭಜಿತ ಹಿಂದುತ್ವವನ್ನು ಅನುಸರಿಸುತ್ತಿದೆ : ಡಿ.ಕೆ. ಶಿವಕುಮಾರ್ -Vishwanews24

ನಾವು ಎಲ್ಲರನ್ನೂ ಒಳಗೊಂಡ ಹಿಂದುತ್ವವನ್ನು ನಂಬುತ್ತೇವೆ , ಆದರೆ ಬಿಜೆಪಿ ವಿಭಜಿತ ಹಿಂದುತ್ವವನ್ನು ಅನುಸರಿಸುತ್ತಿದೆ : ಡಿ.ಕೆ. ಶಿವಕುಮಾರ್ -Vishwanews24

ಹಿಂದೂ ಮತ್ತು ಹಿಂದೂ ಧರ್ಮ ಯಾರೊಬ್ಬರ ಆಸ್ತಿಯಲ್ಲ. ಇವು ಭಾರತದ ನೀತಿಗಳು ಮತ್ತು ಎಲ್ಲರಿಗೂ ಸೇರಿವೆ”

ಬೆಂಗಳೂರು, : “ಕಾಂಗ್ರೆಸ್‌ ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರು ಆಚರಿಸಿದ, ಪ್ರಚಾರ ಮಾಡಿದ ಹಿಂದುತ್ವ ಸಿದ್ಧಾಂತವನ್ನು ದೃಢವಾಗಿ ನಂಬುತ್ತದೆ. ನಾವು ಎಲ್ಲರನ್ನೂ ಒಳಗೊಂಡ ಹಿಂದುತ್ವವನ್ನು ನಂಬುತ್ತೇವೆ” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸೋಮವಾರ ಪಕ್ಷದ ಹಿರಿಯ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, “ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರು ಎಲ್ಲರನ್ನೂ ಒಳಗೊಂಡ ಹಿಂದುತ್ವವನ್ನು ಪ್ರಚಾರ ಮಾಡಿದರು. ಆದರೆ ಬಿಜೆಪಿ ವಿಭಜಿತ ಹಿಂದುತ್ವವನ್ನು ಅನುಸರಿಸುತ್ತಿದೆ” ಎಂದು ಟೀಕಿಸಿದರು.

ಅಂತರ್‌ ಧರ್ಮೀಯ ವಿವಾಹ ನಿಷೇಧಿಸುವ ಬಗ್ಗೆ ಬಿಜೆಪಿ ಪ್ರಸ್ತಾಪಿಸಿರುವ ಕಠಿಣ ಕಾನೂನಿನ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಹಿಂದೂ ಮತ್ತು ಹಿಂದೂ ಧರ್ಮ ಯಾರೊಬ್ಬರ ಆಸ್ತಿಯಲ್ಲ. ಇವು ಭಾರತದ ನೀತಿಗಳು ಮತ್ತು ಎಲ್ಲರಿಗೂ ಸೇರಿವೆ” ಎಂದು ಹೇಳಿದರು.

“ಸಂವಿಧಾನವನ್ನು ರಕ್ಷಿಸುವುದು ನಮ್ಮ ಬದ್ಧತೆ ಮತ್ತು ನಮ್ಮ ನಿಲುವು” ಎಂದು ಅವರು ಪ್ರತಿಪಾದಿಸಿದರು.”ನಾವು ಕಾಂಗ್ರೆಸ್ ಅನ್ನು ಕಾರ್ಯಕರ್ತರನ್ನು ಆಧಾರಿಸಿರುವ ಪಕ್ಷವನ್ನಾಗಿ ಮಾಡಲು ಯೋಜಿಸುತ್ತಿದ್ದೇವೆ. ಆದ್ದರಿಂದ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೇ ಬೂತ್ ಮತ್ತು ಪಂಚಾಯತ್ ಮಟ್ಟದ ಸಮಿತಿಗಳನ್ನು ರಚಿಸಲು ನಾವು ಯೋಜಿಸಿದ್ದೇವೆ” ಎಂದು ತಿಳಿಸಿದರು.

”ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಬಹುಪಾಲು ಜಿಲ್ಲಾ ಪಂಚಾಯತ್‌ಗಳನ್ನು ಗೆಲ್ಲುವ ಪ್ರಬಲ ಪ್ರಯತ್ನದಲ್ಲಿ ಒಂಬತ್ತು ತಂಡಗಳನ್ನು ರಚಿಸಲಾಗುವುದು. ನಮ್ಮ ಎಲ್ಲ ನಾಯಕರು ಈ ತಂಡಗಳಲ್ಲಿ ಮುತುವರ್ಜಿ ವಹಿಸಲಿದ್ದಾರೆ” ಎಂದು ಹೇಳಿದರು.

ಕರ್ನಾಟಕ ರಾಜ್ಯ ಚುನಾವಣಾ ಆಯೋಗ ರಾಜ್ಯದ 5,762 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಡಿಸೆಂಬರ್ 22 ಮತ್ತು 27 ರಂದು ಚುನಾವಣೆ ಘೋಷಿಸಿದ್ದು ಸೋಮವಾರದಿಂದಲ್ಲೇ ನೀತಿ ಸಂಹಿತೆ ಜಾರಿಯಾಗಿದೆ.

Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

16 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

21 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

21 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

21 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

22 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

22 hours ago