ನಿರ್ಭಯಾ ಪ್ರಕರಣ: ಅಪರಾಧಿಗಳಿಗೆ ಮಾ. 20ಕ್ಕೆ ಗಲ್ಲು ಫಿಕ್ಸ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ:ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆ ಶಿಕ್ಷೆ ಜಾರಿಗಾಗಿ ದೆಹಲಿ ನ್ಯಾಯಾಲಯ ಹೊಸ ಡೆತ್ ವಾರಂಟ್ ಹೊರಡಿಸಿದೆ. . ಅವರನ್ನು ಮಾರ್ಚ್ 20, 2020 ರಂದು ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲು ನ್ಯಾಯಾಲಯ ಆದೇಶಿಸಿದೆ.

2012 ರ ಡಿಸೆಂಬರ್‌ನಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಸಲುವಾಗಿ ದೆಹಲಿ ನ್ಯಾಯಾಲಯದಲ್ಲಿ ಇಂದು (ಗುರುವಾರ) ವಿಚಾರಣೆ ನಡೆದಿದೆ.

ನಿನ್ನೆ ಸರ್ಕಾರವು ದೆಹಲಿ ಅತ್ಯಾಚಾರಿಗಳಿಗೆ ಹೊಸ ಡೆತ್ ವಾರಂಟ್ ಜಾರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಅರ್ಜಿಯ ಬಗ್ಗೆ ಪ್ರತಿಕ್ರಿಯೆ ಕೋರಿ ಅಪರಾಧಿಗಳಿಗೆ ನೋಟಿಸ್ ನೀಡಿದ್ದರು ಹಾಗೂ ಗುರುವಾರ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ್ದರು.

ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತವಾದ ಮರುದಿನವೇ ಕೋರ್ಟ್ ಅಪರಾಧಿಗಳಿಗೆ ಹೊಸ ಡೆತ್ ವಾರಂಟ್ ನೀಡಿದೆ.