ನಿಹಾಲ್ ತಾವ್ರೊ ರವರಿಗೆ ಮುಖ್ಯಮಂತ್ರಿಯಿಂದ ಸನ್ಮಾನಕ್ಕೆ ಮನವಿ : ಶಾಸಕ ರಘುಪತಿ ಭಟ್ ಸ್ಪಂದನೆ -Vishwanews24

Featured, ಉಡುಪಿ

ನಿಹಾಲ್ ತಾವ್ರೊ ರವರಿಗೆ ಮುಖ್ಯಮಂತ್ರಿಯಿಂದ ಸನ್ಮಾನಕ್ಕೆ ಮನವಿ : ಶಾಸಕ ರಘುಪತಿ ಭಟ್ ಸ್ಪಂದನೆ -Vishwanews24

ಕೆಪಿಸಿಸಿ ವತಿಯಿಂದಲೂ ಸನ್ಮಾನದ ಭರವಸೆ ..

ಉದ್ಯಾವರ : ಸೋನಿ ವಾಹಿನಿಯ ಪ್ರತಿಷ್ಠಿತ ಇಂಡಿಯನ್ ಐಡಲ್ ಸೀಸನ್ 12ರ ಸ್ಪರ್ಧೆಯಲ್ಲಿ 3 ಲಕ್ಷಕ್ಕೂ ಅಧಿಕ ಸ್ಪರ್ಧಿಗಳ ಸ್ಪರ್ಧೆಯಲ್ಲಿ ಫೈನಲ್ ಹಂತಕ್ಕೆ ತಲುಪಿ ಐದನೇ ಸ್ಥಾನ ಪಡೆದ ಕರ್ನಾಟಕದ ಏಕೈಕ ಸ್ಪರ್ಧಿ, ಮೂಡುಬಿದ್ರೆಯ ನಿಹಾಲ್ ತಾವ್ರೊ ರವರಿಗೆ ಇತ್ತೀಚೆಗೆ ಉದ್ಯಾವರದಲ್ಲಿ ನಿರಂತರ್ ಉದ್ಯಾವರ ಸಂಘಟನೆ ನೇತೃತ್ವದಲ್ಲಿ ಅಭಿನಂದನ ಸಮಾರಂಭ ಏರ್ಪಡಿಸಲಾಗಿತ್ತು.

ಕರ್ನಾಟಕದ ಹೆಸರನ್ನು ವಿಶ್ವದೆತ್ತರಕ್ಕೆ ತಲುಪಲು ತನ್ನ ಸಂಗೀತದ ಮೂಲಕ ಕಾರಣಕರ್ತರಾಗಿರುವ ನಿಹಾಲ್ ತಾವ್ರೊ ರವರನ್ನು ರಾಜ್ಯದ ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸುವಂತೆ ಉಡುಪಿ ಶಾಸಕ ರಘುಪತಿ ಭಟ್ ರವರಲ್ಲಿ ನಿರಂತರ್ ಉದ್ಯಾವರ ಸಂಘಟನೆಯ ಪರವಾಗಿ ಅಧ್ಯಕ್ಷ ಸ್ಟೀವನ್ ಕುಲಾಸೊ ಮನವಿ ಮಾಡಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ರಘುಪತಿ ಭಟ್, ಆದಷ್ಟು ಶೀಘ್ರ ಮುಖ್ಯಮಂತ್ರಿ ಬಳಿ ಮಾತನಾಡಿ ಸನ್ಮಾನಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಉಪಸ್ಥಿತರಿದ್ದ ಉದ್ಯಮಿ ರೊನಾಲ್ಡ್ ಮನೋಹರ್ ಕರ್ಕಡ, ಕೆಪಿಸಿಸಿ ವತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸನ್ಮಾನಿಸುವುದಾಗಿ ಸಂಘಟಕರಿಗೆ ಭರವಸೆ ನೀಡಿದ್ದೂ, ನಿಹಾಲ್ ರವರ ಉಪಸ್ಥಿತಿಯನ್ನು ಗಮನಿಸಿ ಕೆಪಿಸಿಸಿ ವತಿಯಿಂದ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಅ.ವಂ. ಸ್ಟಾನಿ ಬಿ ಲೋಬೋ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜ, ಲಯನ್ಸ್ ಜಿಲ್ಲಾ ದ್ವಿತೀಯ ಉಪಗವರ್ನರ್ ನೇರಿ ಕರ್ನೇಲಿಯೊ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಗೋಡ್ಫ್ರಿ ಡಿಸೋಜ, ಕಾರ್ಯದರ್ಶಿ ಮೈಕಲ್ ಡಿಸೋಜ, ನಿರಂತರ ಕಾರ್ಯದರ್ಶಿ ಒಲಿವೀರಾ ಮಥಾಯಸ್, ಐಸಿವೈಎಂ ಅಧ್ಯಕ್ಷ ರೋಯಲ್ ಕ್ಯಾಸ್ತಲಿನೊ ಮತ್ತಿತರರು ಉಪಸ್ಥಿತರಿದ್ದರು.