ನೂರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ-ಆರು ಮಂದಿ ವಿದ್ಯಾರ್ಥಿನಿಯ ಹೊಸ ತಗಾದೆಗೆ ಕ್ಯಾರೇ ಅನ್ನದ ಕಾಲೇಜು ಆಡಳಿತ ಮಂಡಳಿ-ಹಿಜಾಬ್ ಧರಿಸಿ ಕ್ಲಾಸಲ್ಲಿ ಕೂರುವ ನಿಯಮವಿಲ್ಲ-ಪ್ರಾಂಶುಪಾಲರಿದ ಖಡಕ್ ಉತ್ತರ vishwanews24
ನೂರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ-ಆರು ಮಂದಿ ವಿದ್ಯಾರ್ಥಿನಿಯ ಹೊಸ ತಗಾದೆಗೆ ಕ್ಯಾರೇ ಅನ್ನದ ಕಾಲೇಜು ಆಡಳಿತ ಮಂಡಳಿ-ಹಿಜಾಬ್ ಧರಿಸಿ ಕ್ಲಾಸಲ್ಲಿ ಕೂರುವ ನಿಯಮವಿಲ್ಲ-ಪ್ರಾಂಶುಪಾಲರಿದ ಖಡಕ್ ಉತ್ತರ:vishwanews24
ಉಡುಪಿ: ನೂರಾರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುವ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜು ಇಲ್ಲಿ ಕಳೆದೆರಡು ದಿನಗಳಿಂದ ಹೊಸ ಡ್ರಾಮವೊಂದು ಶುರುವಾಗಿದೆ. ಇಡೀ ಕಾಲೇಜಿನಲ್ಲಿ 100 ಮಂದಿ ಮುಸ್ಲಿಂ ಹುಡುಗಿಯರು ವ್ಯಾಸಂಗ ಮಾಡುತ್ತಿದ್ದಾರೆ ಅದರಲ್ಲಿ ಬೆರಳೆಣಿಕಕೆಯ 3-4 ವಿದ್ಯಾರ್ಥಿನಿರು ಹೊಸ ಕ್ಯಾತೆ ತೆಗೆದು ಹಿಜಾಬ್ ಧರಿಸಿಕೊಂಡು ಕ್ಲಾಸಿನಲ್ಲಿ ಕೂರಲು ಅವಕಾಶ ಕೊಡುವಂತೆ ಕಾಲೇಜಿನ ನಿಯಮವನ್ನು ಮೀರಿ ವರ್ತೀಸಿದ್ದು ಈ ವಿಚಾರಕ್ಕೆ ಸಂಬ0ಧವಾಗಿ ಕಾಲೇಜು ಆಡಳಿತ ಮಂಡಳಿ ಖಡಕ್ ಉತ್ತರ ನೀಡುವ ಮೂಲಕ ಸರ್ವರಿಗೂ ಒಂದೇ ಕಾನೂನು ಎಂದು ತೋರಿಸಿಕೊಟ್ಟಿದೆ.
ಕಾಲೇಜು ನಿಯಮದ ಪ್ರಕಾರ ಕ್ಲಾಸಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಮವಸ್ತç ಧರಿಸಿಕೊಂಡು ಬರಬೇಕೆ ಹೊರತು ಹಿಜಾಬ್ ಧರಿಸಿಕೊಂಡು ಬರುವ ನಿಯಮವಿಲ್ಲವೆಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸಿದೆ.
ಆದರೂ ಬೆರಳೆಣಿಕೆಯ ವಿದ್ಯಾರ್ಥಿನಿಯರು ಈ ಮಾತಿಗೆ ಕಿವಿಗೊಡದೆ ತಮ್ಮದೆ ಹೊಸ ರೂಲ್ಸ್ ಎಂಬ0ತ್ತೆ ವರ್ತಿಸಿದಾಗ ಕಾಲೇಜು ಪ್ರಾಂಶುಪಾಲರು ಆ ವಿದ್ಯಾರ್ಥಿನಿಗಳ ಪೋಷಕರನ್ನು ಕರೆದು ವಿಚಾರ ತಿಳಿಸಿದ್ದರು ಆ ಸಮಯದಲ್ಲಿ ಕಾಲೇಜು ನಿಯಮಕ್ಕೆ ಒಪ್ಪಿಕೊಂಡಿದ್ದರು ಸಹ ಮತ್ತೆ ೪ ವಿದ್ಯಾರ್ಥಿನಿಯರು ಅದೇ ನಡತೆಯನ್ನು ಮುಂದುವರೆಸಿದ ಸಮಯದಲ್ಲಿ ಕಾಲೇಜು ಹಿತವನ್ನ ಬಯಸುವ ಒಬ್ಬ ಪ್ರಾಂಶುಪಾಲ ರುದ್ರೆಗೌಡ ತರಗತಿ ಪ್ರವೇಶಿಸಲು ನಿರ್ಬಂಧ ಹೇರಿದ್ದಾರೆ.
ಸದ್ಯ ಉಡುಪಿಯಲ್ಲಿ ಈಗ ಇದೊಂದು ವಿಚಾರಕ್ಕೆ ಮತೀಯ ಸಂಘಟನೆಗಳು ಇದಕ್ಕೆ ಬೆಂಬಲ ಘೋಷಿಸಿದ ಪರಿಣಾಮವಾಗಿ ಈ ಸುದ್ದಿ ಕಾಲೇಜು ಕ್ಯಾಂಪಸ್ಸಿನಿ0ದ ಹೊರಬಂದು ಸದ್ದು ಮಾಡಿದೆ.
ಸದ್ಯ ಕಾಲೇಜು ಆಡಳಿತ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಿ”ಕಾಲೇಜು ಆವರಣದಲ್ಲಿ ಆಡಳಿತ ಮಂಡಳಿಯ ವಸ್ತçಸಂಹಿತೆ ಪಾಲಿಸುವುದು ಕರ್ತವ್ಯ ಇದರಲ್ಲಿ ಯಾವುದೇ ರಾಜೀ ಇಲ್ಲ, ವೈಯಕ್ತಿಕ ಧಾರ್ಮಿಕ ವಿಚಾರಗಳಿಗೆ ಸಮವಸ್ತç ವಿಚಾರದಲ್ಲಿ ಗೊಂದಲ ಸೃಷ್ಟಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಮತ್ತು ಪ್ರಾಂಶುಪಾಲರ ನಿರ್ಧಾರಕ್ಕೆ ಸಂಪೂರ್ಣ ಸಹಕಾರ ನೀಡಿ ಕಾಲೇಜಿನ ವಿದ್ಯಾಬ್ಯಾಸದ ವಾತಾವರಣ ಹದಗೆಡಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಖಡಕ್ ಉತ್ತರ ನೀಡಿದ್ದಾರೆ.
ಇನ್ನೂ ಈ ಬಗ್ಗೆ ಕ್ಯಾಂಪಸ್‌ಫ್ರ0ಟ್ ಆಫ್ ಇಂಡಿಯಾ ಖಂಡನೆ ವ್ಯಕ್ತಪಡಿಸಿದೆ-ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದೆ.
ಇಂದು ತುರ್ತು ಸಭೆ
ಈ ವಿಚಾರಕ್ಕೆ ಸಂಬ0ಧಿಸಿ ಇಂದು ಕಾಲೇಜು ಆಡಳಿತ ಮಂಡಳಿ ಅಭಿವೃದ್ಧಿ ಸಮಿತಿ , ಉಡುಪಿ ಶಾಸಕ ಮತ್ತು ಪೋಷಕರ ಉಪಸ್ಥಿತಿಯಲ್ಲಿ ತುರ್ತು ಸಭೆ ನಡೆಸಲು ನಿರ್ಧಾರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.