Featured

ನ.14 ರಿಂದ 20 ರವರೆಗೆ ಉಡುಪಿ ಜಿಲ್ಲೆಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ : ಇಂದ್ರಾಳಿ ಜಯಕರ್ ಶೆಟ್ಟಿ – vishwanews24

ಉಡುಪಿ ಜಿಲ್ಲೆಯ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಮಾಹಿತಿ ನೀಡಿದ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ -vishwanews24

ಉಡುಪಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ,ತಂತ್ರಜ್ಞಾನ, ಕೌಶಲ್ಯಾಧಾರಿತ,ವೃತ್ತಿಪರ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ನವೆಂಬರ್14 ರಿಂದ 20 ರವರೆಗೆ ಉಡುಪಿ ಜಿಲ್ಲೆಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ ಎಂದು ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ಕಲ್ಯಾಣಪುರದ ಬೃಂದಾವನ ಹೋಟೆಲ್ ಇಲ್ಲಿನ ಸಭಾಂಗಣದಲ್ಲಿ ನವೆಂಬರ್ 14 ರಂದು “ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ದಿನ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ರತ್ನ ಪುರಸ್ಕೃತ ಇಂದ್ರಾಳಿ ಜಯಕರ ಶೆಟ್ಟಿ ನೇರವೇರಿಸಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ್ ಶೆಟ್ಟಿ,ಮುಖ್ಯ ಅತಿಥಿಗಳಾಗಿ ಶಾಸಕ ಯಶ್ಪಾಲ್ ಸುವರ್ಣ, ಲಾವಣ್ಯ ಕೆ ಆರ್, ಎಂ ಎಂ ಆನಂದ್,ಸುಧಿರ್ ಕುಮಾರ್,ಮೊದಲಾದವರು ಉಪಸ್ಥಿತರಿರುವರು .
ನವೆಂಬರ್15 ರಂದು ಗಣಕೀಕರಣ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೈಜೇಶನ್ ಪ್ರಕ್ರಿಯೆಗಳು ಸಹಕಾರಿ ಸಂಘಗಳ ಬೆಳವಣಿಗೆ ಪೋಷಕ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ ಮಹೇಶ್ ಹೆಗ್ಡೆ ಮೊಳಹಳ್ಳಿ ನೇರವೇರಿಸಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಶಾರದ ಕಲ್ಯಾಣ ಮಂಟಪ ಕೋಟೆಶ್ವರದಲ್ಲಿ ನಡೆಯಲಿದೆ.

ನವೆಂಬರ್16 ರಂದು ” ಸಹಕಾರ ಶಿಕ್ಷಣ ತರಬೇತಿ ಪ್ರಚಾರ ಮೂಲಕ ಸಹಕಾರ ಸಂಸ್ಥೆಗಳಲ್ಲಿ ಪರಿಣಾಮಕಾರಿ ಬದಲಾವಣೆ ಕಾರ್ಯಕ್ರಮದ ಉದ್ಘಾಟನೆ ಇಂದ್ರಾಳಿ ಜಯಕರ್ ಶೆಟ್ಟಿ ನೆರವೇರಿಸಲಿದ್ದು ಕಾರ್ಯಕ್ರಮ ಬಿ ಸಿ ಹೊಳ್ಳ ಸಹಕಾರ ಸಭಾಭವನ ಕೋಟ ಇಲ್ಲಿ ನಡೆಯಲಿದೆ,

ನ.17 ರಂದು ಸಹಕಾರ ಸಂಸ್ಥೆಗಳ ಮೂಲಕ ಬ್ರ್ಯಾಂಡ್ ನಿರ್ಮಾಣ ದಿನ ಕಾರ್ಯಕ್ರಮದ ಉದ್ಘಾಟನೆ ಸಹಕಾರ ರತ್ನ ಡಾ ಎಂ ಎನ್ ರಾಜೇಂದ್ರ ಕುಮಾರ್ ಉದ್ಗಾಟಿಸಲಿದ್ದು ಕಾರ್ಯಕ್ರಮ ಗಣಪತಿ ಸಭಾಭವನ ಬಜಗೋಳಿಯಲ್ಲಿ ನಡೆಯಲಿದೆ.

ನ.18 ರಂದು ಸಾರ್ವಜನಿಕ/ಖಾಸಾಗಿ ಸಹಕಾರಿ ಪಾಲುದಾರಿಕೆ ಬಲಪಡಿಸುವ ದಿನ ಕಾರ್ಯಕ್ರಮ ಸುಧಿರ್ ಮರೋಳಿ ಉದ್ಗಾಟಿಸಲಿದ್ದು ,ವೈ ಸುಧಿರ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಡುಬದ್ರಿ ವೈ ಲಕ್ಷ್ಮಣ ಸಭಾಂಗಣ ಪಡುಬಿದ್ರಿ ಸಿ.ಎ.ಬ್ಯಾಂಕ್ ಇಲ್ಲಿ ಬೆಳಿಗ್ಗೆ 9.30 ನಡೆಯಲಿದ್ದು ಅದೇ ದಿನ ಮಧ್ಯಾಹ್ನ3 ಗಂಟೆಗೆ ನಾಗೂರು ಕೃಷ್ಣ ಕಲಾಮಂದಿರ ಇಲ್ಲಿಯೂ ನಡೆಯಲಿದೆ.

ನವೆಂಬರ್ 19 ರಂದು ಮಹಿಳೆಯರು ಯುವಜನರು ಮತ್ತು ಸಮಾಜದ ಅಬಲವರ್ಗಗಳು ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆ ದಿನದ ಕಾರ್ಯಕ್ರಮ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದು ಕಾರ್ಯಕ್ರಮ ಸರಸ್ವತಿ ಕಲ್ಯಾಣ ಮಂಟಪ ಕೋಟೆಶ್ವರ ಕುಂದಾಪುರ ಇಲ್ಲಿ ನಡೆಯಲಿದೆ .
ನ 20 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಇಂದ್ರಾಳಿ ಜಯಕರ್ ಶೆಟ್ಟಿ ತಿಳಿಸಿದರು.

ಈ ಸಂಧರ್ಭದಲ್ಲಿ ವೈ ಸುಧಿರ್ ಕುಮಾರ್,ಶ್ರೀಧರ್ ಪಿಎಸ್ ,ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.

Vishwa News 24

Recent Posts

ಬೆಳ್ತಂಗಡಿ: ಯುವಕ ಆತ್ಮಹತ್ಯೆ  – vishwanews24

ಬೆಳ್ತಂಗಡಿ: ಯುವಕ ಆತ್ಮಹತ್ಯೆ  ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ಎಂಬಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.…

13 minutes ago

ನಾನು ಸಿಎಂ ಆಗಿರುವುದನ್ನು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ : ಡಿ.ಕೆ. ಶಿವಕುಮಾರ್ – vishwanews24

ನಾನು ಸಿಎಂ ಆಗಿರುವುದನ್ನು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ; ದಿನವೂ ನನ್ನ ವಿರುದ್ಧ ನೆಗೆಟಿವ್ ಹುಡುಕುತ್ತಾರೆ : ಡಿ.ಕೆ. ಶಿವಕುಮಾರ್ ಮೈಸೂರು:…

40 minutes ago

ನಾಳೆ ಬೆಂಗಳೂರಿಗೆ ಪ್ರಧಾನಿ ; ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ; ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು – vishwanews24

ನಾಳೆ ಬೆಂಗಳೂರಿಗೆ ಪ್ರಧಾನಿ ; ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ; ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು ಬೆಂಗಳೂರು: ಪ್ರಧಾನಮಂತ್ರಿ…

53 minutes ago

ಶಿರ್ವ: ಗೂಗಲ್ ಪೇಗೆ ಹಣ ಜಮೆಯಾದ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಗೆ ₹2.49 ಲಕ್ಷ ವಂಚನೆ – vishwanews24

ಶಿರ್ವ: ಗೂಗಲ್ ಪೇಗೆ ಹಣ ಜಮೆಯಾದ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಗೆ ₹2.49 ಲಕ್ಷ ವಂಚನೆ ಶಿರ್ವ: ಮೊಬೈಲಿನಲ್ಲಿರುವ ಗೂಗಲ್…

1 hour ago

ನ.13ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಡುಪಿಗೆ ಭೇಟಿ – vishwanews24

ನ.13ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಡುಪಿಗೆ ಭೇಟಿ ಉಡುಪಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್…

2 hours ago

ನ.13ರಂದು ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೊದಲ ದಿನದ ವೇಳಾಪಟ್ಟಿ ಪ್ರಕಟ – vishwanews24

ನ.13ರಂದು ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೊದಲ ದಿನದ ವೇಳಾಪಟ್ಟಿ ಪ್ರಕಟ ಉಡುಪಿ: ಯಶವಂತಪುರ ಜಂಕ್ಷನ್- ಮಡಗಾಂವ್ ಜಂಕ್ಷನ್ ನಡುವೆ…

2 hours ago