ನ. 8 – ಖಗ್ರಾಸ ಚಂದ್ರಗ್ರಹಣ : ಹಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ ; ಕಟೀಲು ದೇವಳದಲ್ಲಿ ನಾಳೆ ಸೇವೆ, ಅನ್ನಪ್ರಸಾದ ಇರುವುದಿಲ್ಲ – Vishwanews24

Featured, ರಾಜ್ಯ ನ್ಯೂಸ್

ಚಂದ್ರಗ್ರಹಣ – ಹಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ

ದೇವರ ದರ್ಶನದ ಸಮಯದಲ್ಲಿ ಬದಲಾವಣೆ

ಸ್ಪರ್ಶ ಕಾಲ, ಮೋಕ್ಷ ಕಾಲ ವಿವರ ಇಲ್ಲಿದೆ..

ಬೆಂಗಳೂರು: ನಾಳೆ ನವೆಂಬರ್ 8ರಂದು ಸಂಪೂರ್ಣ ಚಂದ್ರಗ್ರಹಣ(Lunar eclipse) ಸಂಭವಿಸಲಿದೆ. ಭಾರತದ ಪ್ರಮುಖ ಸ್ಥಳಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. 

ಗ್ರಹಣವು ಮಧ್ಯಾಹ್ನ 2.39ಕ್ಕೆ ಸ್ಪರ್ಶಿಸಿ ಅಪರಾಹ್ನ 4.29ಕ್ಕೆ ಉಚ್ಛ್ರಾಯ ಮಧ್ಯ ಸ್ಥಿತಿ ಗೆ ತಲುಪಿ ಸಂಜೆ 6.19ಕ್ಕೆ ಮೋಕ್ಷವಾಗಲಿದೆ. ಚಂದ್ರೋದಯ ಆಗುವುದು ಸಂಜೆ 5.59ಕ್ಕೆ. ಆ ನಂತರ ಕಾಣಿಸುತ್ತದೆ. ಆದರೆ ಮೋಕ್ಷ ಕಾಲ ಸಂಜೆ 6.19ಕ್ಕೆ ಇರುವುದರಿಂದ 20 ನಿಮಿಷದಲ್ಲಿ ಚಂದ್ರ ಗ್ರಹಣದ ದರ್ಶನ ಸಹಿತ ಇಡೀ ಗ್ರಹಣ ಮುಗಿದು ಹೋಗುತ್ತದೆ. ಇದು ಕಾರ್ತಿಕ ಹುಣ್ಣಿಮೆ ಗ್ರಹಣವಾಗಿದೆ.

ಈ ದಿನ ಹಗಲು ಭೋಜನ ನಿಷಿದ್ಧ. ಬಾಲವೃದ್ಧರೋಗಿಗಳಿಗೆ 11.30 ರ ವರೆಗೆ ಮಾಡಬಹುದು.

Lunar eclipse

 

ಹಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ: ನಾಳೆ ರಾಹುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಮೈಸೂರಿನ ಚಾಮುಂಡಿದೇವಿ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಾಳೆ ಮಧ್ಯಾಹ್ನ 1 ಗಂಟೆ ಬಳಿಕ ಚಾಮುಂಡಿಬೆಟ್ಟಕ್ಕೆ ಭಕ್ತರ ನಿಷೇಧವಿರಲಿದೆ.

ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕಟೀಲು ದೇವಸ್ಥಾನಗಳ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಧರ್ಮಸ್ಥಳ ದೇವಸ್ಥಾನ ನಾಳೆ ಮಧ್ಯಾಹ್ನ 1.30ರಿಂದ ಸಂಜೆ 7ರವರೆಗೆ ಬಂದ್ ಆಗಿರಲಿದೆ. ನಾಳೆ ಸೇವೆ, ಅನ್ನಪ್ರಸಾದ ಇರುವುದಿಲ್ಲ. ನಾಳೆ ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30ರವರೆಗೆ ದರ್ಶನಕ್ಕೆ ನಿರ್ಬಂಧವಿರಲಿದೆ. ನಂತರ ಸಂಜೆ 7.30ರಿಂದ ರಾತ್ರಿ 9ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಬೆಳಗ್ಗೆ 9.30ರ ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರವೇಶ ನಿಷೇಧ ಹೇರಿದ್ದು ರಾತ್ರಿ 8 ಗಂಟೆಗೆ ಕಟೀಲು ದೇಗುಲದಲ್ಲಿ ಪೂಜೆ, ಅನ್ನಪ್ರಸಾದ ಇರಲಿದೆ.

nithya bhavishya, ಮೇಷ ರಾಶಿಯವರಿಗಿಂದು ಯೋಗದ ದಿನ..! ನಿಮ್ಮ ರಾಶಿ ಭವಿಷ್ಯ ಹೇಗಿದೆ? -  astrology today kannada 20 may and mesha rashi people may get profit in  work - Vijaya Karnataka

ಈ ದಿನ ಕಟೀಲು ದೇವಳದಲ್ಲಿ ದುರ್ಗೆಗೆ ಬೆಳಿಗ್ಗೆ 9.30 ಗೆ ಪೂಜೆ. ಹಗಲು ಭೋಜನ ಇಲ್ಲ.11.30. ರ ತನಕ ಫಲಾಹಾರ ಇದೆ. ರಾತ್ರಿ 8 ಗಂಟೆಗೆ ರಾತ್ರಿ ಪೂಜೆಗಳು ನಡೆಯುತ್ತದೆ.8 ಕ್ಕೆ ಭೋಜನವೂ ಇದೆ.

ಗ್ರಹಣಕಾಲದಲ್ಲಿ ದೇವಳ ತೆರೆದಿರುತ್ತದೆ. ಮಧ್ಯಕಾಲದ ವರೆಗೆ ದೇವರಿಗೆ ಅಭಿಷೇಕ ಇದೆ. ಮಧ್ಯಕಾಲ 4.29 ಕ್ಕೆ ಗ್ರಹಣದ ವಿಶೇಷ ಪೂಜೆ ಇದೆ.

ದೇವರಿಗೆ ತುಪ್ಪ, ಶುದ್ಧ ಎಳ್ಳೆಣ್ಣೆ ಸಮರ್ಪಿಸಿ ದೋಷನಿವಾರಿಸಿಕೊಳ್ಳಬಹುದು. ಅಕ್ಕಿ ಹಾಗೂ ಉದ್ದು/ ಉದ್ದಿನಬೇಳೆ ದಾನ ನೀಡಬಹುದು.
ಈ ಸಂದರ್ಭದಲ್ಲಿ ಜಪ ಮಾಡಿದಲ್ಲಿ ನೂರುಪಟ್ಟು ಅನುಗ್ರಹ.

Leave a Reply