ಪಡುಬಿದ್ರಿ: ಆಂಧ್ರ ಪ್ರದೇಶದಲ್ಲಿ ಮೀನಿನ ಕಂಟೇನರ್ ಮತ್ತು ಸರಕು ಲಾರಿಯ ಮಧ್ಯೆ ಅಪಘಾತ – ಉಚ್ಚಿಲ ಮೂಲದ ವ್ಯಕ್ತಿ ಗಂಭೀರ – Vishwanews24

Featured, ಉಡುಪಿ

ಪಡುಬಿದ್ರಿ: ಆಂಧ್ರ ಪ್ರದೇಶದಲ್ಲಿ ಮೀನಿನ ಕಂಟೇನರ್ ಮತ್ತು ಸರಕು ಲಾರಿಯ ಮಧ್ಯೆ ಅಪಘಾತ – ಉಚ್ಚಿಲ ಮೂಲದ ವ್ಯಕ್ತಿ ಗಂಭೀರ

ಪಡುಬಿದ್ರಿ: ಆಂಧ್ರಪ್ರದೇಶದ ವಿಜಯವಾಡ-ಗುಂಟೂರು ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್‌ ಬಳಿ ಮೀನಿನ ಕಂಟೇನರ್ ಮತ್ತು ಸರಕು ಲಾರಿಯ ಮಧ್ಯೆ ನಡೆದ ಅಪಘಾತದಲ್ಲಿ ಉಚ್ಚಿಲ ಮೂಲದ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಾಳುವನ್ನು ಮೀನಿನ ಲಾರಿಯ ಚಾಲಕ ಉಚ್ಚಿಲ ಬಡಾ ಗ್ರಾಮದ ಭಾಸ್ಕರ ನಗರದ ನಿವಾಸಿ ಬಶೀರ್ ಎಂದು ಗುರುತಿಸಲಾಗಿದೆ.

ಇನ್ನು ಸರಕು ಲಾರಿಯ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಬಶೀರ್‌ನ ಸಂಬಂಧಿಕರು ಉಚ್ಚಿಲ ಬಡಾ ಗ್ರಾಮದಿಂದ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ ಬಿಡುಗಡೆ – ಯಾವ ದಾಖಲೆಗಳು ಬೇಕು? ಇಲ್ಲಿದೆ ಮಾಹಿತಿ – Vishwanews24

Leave a Reply