ಪಡುಬಿದ್ರಿ : ಪಿಕಪ್ ವಾಹನ ಡಿಕ್ಕಿ – ಸ್ಕೂಟರ್ ಸವಾರ ಗಂಭೀರ ಗಾಯ – Vishwanews24
ಪಡುಬಿದ್ರಿ : ಪಿಕಪ್ ವಾಹನ ಡಿಕ್ಕಿ ಸ್ಕೂಟರ್ ಸವಾರನಿಗೆ ಗಂಭೀರ ಗಾಯ
ಪಡುಬಿದ್ರಿ : ಇಲ್ಲಿನ ಸೇತುವೆ ಬಳಿ ಸ್ಕೂಟರ್’ವೊಂದಕ್ಕೆ ಪಿಕಪ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ. ಪಲಿಮಾರು ಶಾಂಭವಿ ಕಂಪೌಂಡು ನಿವಾಸಿ ವಿಜಯ ಪೂಜಾರಿ(68) ಗಾಯಗೊಂಡವರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯ್ ಪೂಜಾರಿ ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದರು. ಉಡುಪಿಯಿಂದ ಮನೆಗೆ ಬರುತ್ತಿದ್ದ ಇವರು ಸೇತುವೆ ಬಳಿ ಬರುತ್ತಿರುವ ಸಂದರ್ಭ ಅದೇ ಕಡೆಯಿಂದ ಬಂದ ಪಿಕಪ್ ಡಿಕ್ಕಿಯಾಗಿದೆ. ಸವಾರ ಎಸೆಯಲ್ಪಟ್ಟರೆ ಸ್ಕೂಟರ್ ಪಿಕಪ್ ನಡಿಯಲ್ಲಿ ಸಿಲುಕಿಕೊಂಡಿದೆ. ಪವಾಡ ಸದೃಶ್ಯ ಎಂಬಂತೆ ಪಿಕಪ್ ನಡಿಗೆ ಸಿಲುಕುವುದರಿಂದ ಬಚಾವಾಗಿದ್ದಾರೆ.

ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
