ಪಡುಬಿದ್ರಿ : ಪಿಸ್ತೂಲು, ತಲವಾರು ತೋರಿಸಿ ಉದ್ಯಮಿಯಿಂದ 3 ಲಕ್ಷ ರೂ. ದರೋಡೆ ; ಪ್ರಕರಣ ದಾಖಲು – Vishwanews24
ಪಡುಬಿದ್ರಿ: ಪಿಸ್ತೂಲು, ತಲವಾರು ತೋರಿಸಿ ಉದ್ಯಮಿಯಿಂದ 3 ಲಕ್ಷ ರೂ. ದರೋಡೆ; ಪ್ರಕರಣ ದಾಖಲು – Vishwanews24
ಪಡುಬಿದ್ರಿ: ಕಂಚಿನಡ್ಕ ರಸ್ತೆಯಾಗಿ ಜ. 31ರ ರಾತ್ರಿಯ ಸುಮಾರು 8ಗಂಟೆಯ ವೇಳೆಗೆ ಮನೆಯತ್ತ ಹೋಗುತ್ತಿದ್ದ ತರಕಾರಿ ಉದ್ಯಮಿ ಮನ್ಸೂರ್ ಎಂಬುವರ ಬಳಿಯಿದ್ದ 3ಲಕ್ಷ ರೂ. ಗಳನ್ನು ಗುಂಪೊಂದು ದರೋಡೆ ಗೈದಿರುವ ಬಗ್ಗೆ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ರಿಕ್ಷಾ ಹಾಗೂ ಎರಡು ಕಾರುಗಳಲ್ಲಿ ಸುಮಾರು 8 ಮಂದಿ ದರೋಡೆಕೋರರು ಬಂದಿದ್ದರು. ಪಿಸ್ತೂಲ್, ಚೂರಿ, ದೊಣ್ಣೆ, ತಲವಾರುಗಳನ್ನು ಹೊಂದಿದ್ದ ಈ ಗುಂಪು ಉದ್ಯಮಿಯನ್ನು ತಡೆದು ನಿಲ್ಲಿಸಿ ಹಣೆಗೆ ಪಿಸ್ತೂಲನ್ನು ಗುರಿ ಇರಿಸಿ ಹಣವನ್ನು ನೀಡುವಂತೆ ಬೆದರಿಸಿತ್ತು ಎಂದು ಪೋಲೀಸರಿಗಿತ್ತ ದೂರಲ್ಲಿ ತಿಳಿಸಲಾಗಿದೆ.
ಆರೋಪಿಗಳನ್ನು ಕಂಚಿನಡ್ಕ ನಿವಾಸಿಗಳಾದ ಹಸನ್ ಬಾವಾ, ಫಿರೋಝ್, ರೆಹಮಾನ್, ನಝೀರ್, ರಹೀಮ್, ಯೂಸುಫ್, ಕಾಟಿಪಳ್ಳದ ಅಜೀದ್ ಸಹಿತ ಎಂಟು ಮಂದಿ ದರೋಡೆ ನಡೆಸಿರುವ ಆರೋಪಿಗಳೆಂದು ಪೋಲೀಸರಿಗಿತ್ತ ದೂರಲ್ಲಿ ಮನ್ಸೂರ್ ತಿಳಿಸಿದ್ದಾರೆ.
ದೂರುದಾರ ಮನ್ಸೂರ್ ಉಡುಪಿಯ ಸರಕಾರಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
