ಪಡುಬಿದ್ರಿ ಬಂಟರ ಸಂಘದಲ್ಲಿ ಮಾ.12ಕ್ಕೆ ಸದ್ಗುರು ಶ್ರೀ ನಿತ್ಯಾನಂದ ಗುರುಗಳ ಮೂರ್ತಿ ಪ್ರತಿಷ್ಠ್ಠಾಪನೋತ್ಸವ, ಬಂಟರ ಚಾವಡಿ ಮತ್ತು ಕೃಷ್ಣ ಸುಧಾಮ ವೇದಿಕೆ ಉದ್ಘಾಟನೆ : ಡಾ ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿ

Featured, ಉಡುಪಿ

ಪಡುಬಿದ್ರಿ ಬಂಟರ ಸಂಘದಲ್ಲಿ
ಮಾ.12ಕ್ಕೆ ಸದ್ಗುರು ಶ್ರೀ ನಿತ್ಯಾನಂದ ಗುರುಗಳ ಮೂರ್ತಿ ಪ್ರತಿಷ್ಠ್ಠಾಪನೋತ್ಸವ,
ಬಂಟರ ಚಾವಡಿ ಮತ್ತು ಕೃಷ್ಣ ಸುಧಾಮ ವೇದಿಕೆ ಉದ್ಘಾಟನೆ.

ಪಡುಬಿದ್ರಿ : ಕರಾವಳಿಯ ಪ್ರತಿಷ್ಠಿತ ಬಂಟರ ಸಂಘದ ಪಡುಬಿದ್ರಿ ಬಂಟರ ಭವನ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಣೀಯವಾದ ಕಟ್ಟಡವಾಗಿದ್ದು, ಬಂಟ ಸಮಾಜಕ್ಕೆ ಹೆಮ್ಮೆಯ ಸಂಕೇತವಾಗಿದೆ. ಇದೀಗ ಸಂಘದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸದ್ಗುರು ನಿತ್ಯಾನಂದ ಪರಮ ಗುರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿ ವರ್ಷ ಗುರುವಂದನಾ ಕಾರ್ಯಕ್ರಮ ನಡೆಸುವುದರೊಂದಿಗೆ ವಿವಿಧ ದಾನಿಗಳ ಸಹಕಾರದಿಂದ ಈಗಾಗಲೇ ನಿರ್ಮಾಣಗೊಂಡಿರುವ ಸಂಘದ ಅಭಿವೃದ್ಧಿ ಯೋಜನೆಗಳನ್ನು ಮಾ.11 ಮತ್ತು 12 ರಂದು ಧಾರ್ಮಿಕ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಉದ್ಘಾಟಿಸಲಾಗುವುದೆಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
.
ಪಡುಬಿದ್ರಿ ಬಂಟರ ಭವನ 2004ರಲ್ಲಿ ಅಂದಿನ ಸಂಘದ ಅಧ್ಯಕ್ಷರು ಲ| ಸುರೇಶ್ ಶೆಟ್ಟಿ ಗುಂಡ್ಲಾಡಿಯವರ ಮುತುವರ್ಜಿಯಿಂದ ನಿರ್ಮಾಣವಾಗಿತ್ತು. ಎರ್ಮಾಳ್ ಶಶಿಧರ ಶೆಟ್ಟಿಯವರು ಕಟ್ಟಡ ಸಮಿತಿಯ ಅಧ್ಯಕ್ಷರಾಗಿದ್ದರು. ಇದೀಗ ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಹೆಜಮಾಡಿ, ನಡ್ಸಾಲು, ಪಾದೆಬೆಟ್ಟು, ಪಡುಬಿದ್ರಿ, ಅವರಾಲು, ಫಲಿಮಾರು, ಎರ್ಮಾಳ್ ತೆಂಕ, ಎರ್ಮಾಳ್ ಬಡಾ, ಪಣಿಯೂರು, ಎಲ್ಲೂರು, ಕುಂಜೂರು, ಅದಮಾರು, ಅಡ್ವೆ, ಸಾಂತೂರು, ನಂದಿಕೂರು, ಇನ್ನಾ ಗ್ರಾಮಗಳ ಗ್ರಾಮೀಣ ಭಾಗದ ಕಟ್ಟಕಡೆಯ ಬಂಟ ಸಮಾಜದ ಪ್ರತಿಯೋರ್ವರಿಗೂ ಸಂಘದಲ್ಲಿ ಸಕ್ರಿಯರಾಗಬೇಕು. ಸಮಾಜದಲ್ಲಿರುವ ವಿಧವೆಯರು, ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ಬಡ ವಿದ್ಯಾರ್ಥಿಗಳು, ಮನೆ ಇಲ್ಲದವರು, ಅನಾರೋಗ್ಯ ಪೀಡಿತರಿಗೆ ಸಹಕಾರ, ಬಡ ಹೆಣ್ಣು ಮಕ್ಕಳ ಮದುವೆಗೆ ನೆರವಾಗುವ ಉದ್ದೇಶದಿಂದ ಮತ್ತು ಸಂಘಟನಾತ್ಮಕವಾಗಿ ನಾವು ಒಂದಾಗುವ ವಿನೂತನ ಕಾರ್ಯಕ್ರಮವೇ ಗ್ರಾಮೀಣ ಬಂಟರ ಮನೆ ಕಡೆ ಹೋಗಿ ಬಂಟರ ಗ್ರಾಮಸಭೆಗಳನ್ನು ನಡೆಸಲಾಗುವುದೆಂದರು.
ಸಂಘದಲ್ಲಿ ಸಕ್ರಿಯ ತಂಡವನ್ನು ರಚಿಸಿಕೊಂಡು ವಿವಿಧ ಸಮಿತಿಗಳನ್ನು ರೂಪಿಸಿಕೊಂಡು ಜವಾಬ್ದಾರಿಯನ್ನು ಸಂಘದ ಸದಸ್ಯರಿಗೆ ನೀಡಲಾಗಿದೆ. ಸಿರಿಮುಡಿ ದತ್ತಿ ನಿಧಿ, ಮಹಿಳಾ ಸಮಿತಿ, ಯುವ ಸಮಿತಿ, ಸಾಂಸ್ಕøತಿಕ ಸಮಿತಿ, ಕ್ರೀಡಾ ಸಮಿತಿ, ಧಾರ್ಮಿಕ ಸಮಿತಿ, ಕಾರ್ಯಕ್ರಮ ಸಂಯೋಜನ ಸಮಿತಿ, ಗ್ರಾಮ ಸಮಿತಿ, ಮಾಹಿತಿ ಕೈಪಿಡಿ ಸಮಿತಿ, ಕಲ್ಯಾಣನಿಧಿ ಸಮಿತಿ, ಸರಕಾರಿ ಸವಲತ್ತುಗಳ ಮಾಹಿತಿ ಸಮಿತಿ, ಸಂಘಟನಾ ಸಮಿತಿಗಳನ್ನು ರಚಿಸಿ ವಿವಿಧ ರಚನಾತ್ಮಕವಾದ ಕಾರ್ಯಯೋಜನೆಗÀಳನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ಸದಸ್ಯರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸುವ ಮತ್ತು ಐಕ್ಯತೆಗಾಗಿ ಪ್ರತಿ ತಿಂಗಳಿನ ಮೊದಲ ಮಂಗಳವಾರ ಸತ್ಯನಾರಾಯಣ ಪೂಜೆಯೊಂದಿಗೆ ಸಂಘದ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮವಿದೆ.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ತನ್ನ ಸಮಾಜಕ್ಕೆ ಮತ್ತು ಸಂಘಕ್ಕೆ ಶಾಶ್ವತವಾದ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುವ ವಾಗ್ದಾನ ನೀಡಿ ಈಗ ಕೇವಲ 8 ತಿಂಗಳಲ್ಲಿ ಸಂಘದ ಹಿರಿಯ ಸಹಕಾರ ದಾನಿಗಳ ನಿರಂತರ ಸಂಪರ್ಕದಿಂದ ಸುಮಾರು ರೂ.1 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ದೊರಕಿದೆ.
ಸಮಾಜದ ಗಣ್ಯರನ್ನು ದಾನಿಗಳನ್ನು ಸಂಪರ್ಕಿಸಿ ಪಡುಬಿದ್ರಿ ಬಂಟರ ಸಮಾಜ ಮತ್ತು ಸಂಘದ ಅಭಿವೃದ್ಧಿಗೆ ವಿವಿಧ ಯೋಜನೆ ಕಾರ್ಯಗತಗೊಳಿಸಲಾಗಿದ್ದು, ಎಂ.ಆರ್.ಜಿ ಗ್ರೂಪ್‍ನ ಸಿ.ಎಂ.ಡಿ. ಕೆ. ಪ್ರಕಾಶ್ ಶೆಟ್ಟಿಯವರು ಬಂಟರ ಭವನದ ಸಂಪೂರ್ಣ ಕಟ್ಟಡವನ್ನು ಹವಾ ನಿಯಂತ್ರಣವನ್ನಾಗಿಸಲು ರೂ.50 ಲಕ್ಷ ದೇಣಿಗೆ ನೀಡಿದ್ದು ಕೆಲಸ ಪ್ರಾರಂಭವಾಗಿದೆ. ಸದ್ಗುರು ನಿತ್ಯಾನಂದ ಪರಮ ಗುರುಗಳ ಮೂರ್ತಿ ಪ್ರತಿಷ್ಠಾಪನೆಯನ್ನು ಪೂನಾದ ಉದ್ಯಮಿ ಎರ್ಮಾಳ್ ಚಂದ್ರಹಾಸ ಶೆಟ್ಟಿಯವರು ಕೊಡುಗೆಯಾಗಿ ನೀಡಲಿದ್ದಾರೆ. ಬೆಳಗಾವಿಯ “ರಾಮದೇವ್” ಹೋಟೆಲ್ ಮಾಲಕರು ಬಂಟ ಸಮಾಜದ ಹಿರಿಯರಾದ ಬೋಳ ರಘುರಾಮ ಕೆ. ಶೆಟ್ಟಿಯವರು ಬಂಟರ ಚಾವಡಿ ಸಭಾಂಗಣದ ದಾನಿಯಾಗಿದ್ದಾರೆ. ಕೃಷ್ಣ ಪ್ಯಾಲೇಸ್‍ನ ಮಾಲಕರಾದ ಕೃಷ್ಣ ವೈ. ಶೆಟ್ಟಿಯವರು “ಕೃಷ್ಣ ಸುಧಾಮ” ವೇದಿಕೆಯ ದಾನಿಯಾಗಿದ್ದು, ಆವರಣಗೋಡೆ ಮತ್ತು ಹೈಮಾಸ್ಕ್ ವಿದ್ಯುತ್ ದೀಪವನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜರವರು ಅನುದಾನದಿಂದ ನಡೆಸಲಾಗಿರುತ್ತದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಡಾ| ಎಂ.ಎನ್. ರಾಜೇಂದ್ರ ಕುಮಾರ್, ಮಾತೃ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮುಂಬಯಿಯ ಉದ್ಯಮಿ ಅಶೋಕ್ ಆರ್. ಶೆಟ್ಟಿ, ಭಾಸ್ಕರ ಶೆಟ್ಟಿ ನವಿ ಮುಂಬಯಿ, ಎರ್ಮಾಳ್ ಬಾಲಚಂದ್ರ ಶೆಟ್ಟಿ ಪೂನಾ, ನಾರಾಯಣ ಶೆಟ್ಟಿ ಪೂನಾರವರು ವಿಶೇಷ ದಾನಿಗಳಾಗಿದ್ದಾರೆ.
ಪಡುಬಿದ್ರಿ ಬಂಟರ ಸಂಘದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ವಿಶಾಲವಾದ 3 ಸಭಾಂಗಣವಿದ್ದು ಬಂಟರ ಭವನವÀನ್ನು ಸಂಪೂರ್ಣ ಹವಾ ನಿಯಂತ್ರಣಗೊಳಿಸಲಾಗುತ್ತಿದ್ದು, ಆಕರ್ಷಣೀಯವಾದ ಬಂಟರ ಚಾವಡಿ ಸಭಾಭವನ ನಿರ್ಮಾಣವಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಹವಾನಿಯಂತ್ರಿತ ಮಿನಿ ಸಭಾಂಗಣ ವ್ಯವಸ್ಥೆಗೊಳಿಸಲಾಗುತ್ತಿದೆ.
ಮಾರ್ಚ್ 11ರಂದು 4 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಸದ್ಗುರು ನಿತ್ಯಾನಂದ ಗುರುಗಳ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಮಾರ್ಚ್ 12ರ ಬೆಳಿಗ್ಗೆ 10 ಗಂಟೆಗೆ ಪ್ರತಿಷ್ಠಾ ಧಾರ್ಮಿಕ ಕಾರ್ಯಕ್ರಮ ಜರಗಲಿದ್ದು, ಸಂಜೆ 5ಕ್ಕೆ ಸಭಾ ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಿನಯ್ ಹೆಗ್ಡೆಯವರು ಉದ್ಘಾಟಿಸಲಿದ್ದಾರೆ. ಎಂ.ಆರ್.ಜಿ ಗ್ರೂಪ್‍ನ ಎಂ.ಡಿ ಕೆ. ಪ್ರಕಾಶ್ ಶೆಟ್ಟಿಯವರು, ದಾನಿಗಳಾದ ಬೋಳ ರಘುರಾಮ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಡಾ| ಎಂ.ಎನ್.ರಾಜೇಂದ್ರಕುಮಾರ್, ಐಕಳ ಹರೀಶ್ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ ಸಹಿತ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸರ್ವ ಸಮಾಜದವರಿಗೂ ಆಹ್ವಾನಿಸಲಾಗಿದೆಂದು ಬಂಟರ ಸಂಘದ ಅಧ್ಯಕ್ಷರಾದ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಬಂಟ್ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷರಾದ ಎರ್ಮಾಳ್ ಶಶಿಧರ್ ಕೆ. ಶೆಟ್ಟಿ, ಸಿರಿಮುಡಿ ದತ್ತಿನಿಧಿಯ ಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿ, ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿಶೆಟ್ಟಿ ಗುಂಡ್ಲಾಡಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್ ಎಸ್ ಶೆಟ್ಟಿ,ಶಿವಪ್ರಸಾದ್ ಶೆಟ್ಟಿ ಎಲ್ಲದಡಿ,ಅನಿಲ್ ಕುಮಾರ್ ಶೆಟ್ಟಿ,ಮಹಾಬಲ ಶೆಟ್ಟಿ,ವಿನಯ್ ಶೆಟ್ಟಿ ಎರ್ಮಾಳ್,ಮುರಳಿನಾಥ ಶೆಟ್ಟಿ,ಜಯಶೆಟ್ಟಿ,ಧನಪಾಲ್ ಶೆಟ್ಟಿ ಉಪಸ್ಥಿತಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್

ವಿಶ್ವನ್ಯೂಸ್24