ಪಡುಬಿದ್ರಿ: UPCL ಬೃಹತ್ ಗಾತ್ರದ  ಪೈಪ್‌ಲೈನ್ ತುಂಡು: ಉಪ್ಪು ಮಿಶ್ರಿತ ಬಿಸಿ ನೀರು ಮತ್ತೆ ಸಮುದ್ರಕ್ಕೆ ; ಸ್ಥಳೀಯರ ಆಕ್ರೋಶ -Vishwanews24

Featured, ಉಡುಪಿ

ಪಡುಬಿದ್ರಿ: UPCL ಬೃಹತ್ ಗಾತ್ರದ  ಪೈಪ್‌ಲೈನ್ ತುಂಡು: ಉಪ್ಪು ಮಿಶ್ರಿತ ಬಿಸಿ ನೀರು ಮತ್ತೆ ಸಮುದ್ರಕ್ಕೆ ; ಸ್ಥಳೀಯರ ಆಕ್ರೋಶ -Vishwanews24

ಪಡುಬಿದ್ರಿ: ಉಡುಪಿ ಜಿಲ್ಲೆಯ ಕಾಪು ಬಳಿಯ ಎಲ್ಲೂರಿನಲ್ಲಿರುವ ಅದಾನಿ ಮಾಲಿಕತ್ವದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವು (ಯುಪಿಸಿಎಲ್) ಸಮುದ್ರದ ನೀರನ್ನು ಬಳಸಿದ ಬಳಿಕ ಮರಳಿ ಸಮುದ್ರಕ್ಕೆ ಬಿಡುವ ಬೃಹತ್ ಗಾತ್ರದ ಪೈಪ್‌ಲೈನ್ ತುಂಡಾಗಿ ಕೆಲವು ದಿನಗಳೇ ಕಳೆದಿವೆ.ಆದರೂ ಕಂಪೆನಿಯು ಒಡೆದ ಬೃಹತ್ ಪೈಪ್ ನ್ನು ಸರಿಪಡಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಜೀವಗಳನ್ನು ಉಳಿಸೋಣ, ನಮ್ಮ ಸ್ವಂತ ಬ್ಲಡ್ ಬ್ಯಾಂಕ್ ಶೀಘ್ರದಲ್ಲೇ ಬರಲಿದೆ : ಸೋನು ಸೂದ್ -Vishwanews24

ಎರ್ಮಾಳು ತೆಂಕ ಸಮುದ್ರ ತೀರದಲ್ಲಿ ಯುಪಿಸಿಎಲ್ ಪೈಪ್‌ಲೈನ್ ಅಳವಡಿಸಿತ್ತು. ಸಮುದ್ರದ ನೀರಿನ ಏರಿಳಿತದ ಸಂದರ್ಭ ಬೃಹತ್ ಗಾತ್ರದ ಪೈಪ್‌ಗಳನ್ನು ವೈಜ್ಞಾನಿಕವಾಗಿ ಅಳವಡಿಸದ ಕಾರಣ ತುಂಡಾಗಿದೆ.

ಸಮುದ್ರ ತೀರದಿಂದ ಸುಮಾರು ಒಂದು ಕಿಮೀ ದೂರದ ಸಮುದ್ರದಾಳದಲ್ಲಿ ಈ ನೀರು ಸಮುದ್ರ ಸೇರಬೇಕಿದೆ. ಆದರೆ ಕಂಪನಿಯ ನಿರ್ಲಕ್ಷ್ಯದಿಂದಾಗಿ ತೀರ ಪ್ರದೇಶದಲ್ಲೇ ನೀರು ಹೊರ ಚೆಲ್ಲುತ್ತಿದೆ.

ಪುತ್ತೂರು : ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಸಾವು -Vishwanews24

ಕಂಪನಿ ಅಧಿಕಾರಿಗಳೊಂದಿಗೆ ಈ ಕುರಿತು ವಿಚಾರಿಸಿದಾಗ ತುರ್ತಾಗಿ ರಿಪೇರಿ ಮಾಡುತ್ತೇವೆ ಎಂದಿದ್ದರು. ಆದರೆ ಈಗ ಕಂಪನಿಯ ಉಪ್ಪು ಮಿಶ್ರಿತ ಬಿಸಿ ನೀರು ಮತ್ತೆ ಸಮುದ್ರ ಕಿನಾರೆಗೆ ಬಿಡಲಾಗುತ್ತಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಬೆದರಿಕೆ ಕರೆಗಳು ಬರುತ್ತಿರುವ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗದ ದಿನೇಶ್ ಕಲ್ಲಹಳ್ಳಿ -Vishwanews24