ಪರೀಕ್ಷೆ ವೇಳೆ ನಿದ್ರೆ ತಪ್ಪಿಸಲು ಉಗ್ರರು ಬಳಸುವ ಮಾತ್ರೆ ಸೇವಿಸುತ್ತಿರುವ ವಿದ್ಯಾರ್ಥಿಗಳು : ಏನಿದು ಮಾತ್ರೆ? – ಆಘಾತಕಾರಿ ಸುದ್ದಿ ಓದಿ.. Vishwanews24
ಪರೀಕ್ಷೆ ಸಮಯದಲ್ಲಿ ನಿದ್ರೆ ತಪ್ಪಿಸಲು ಉಗ್ರರು ಬಳಸುವ ಮಾತ್ರೆ ಸೇವಿಸುತ್ತಿರುವ ವಿದ್ಯಾರ್ಥಿಗಳು ; ಶಾಕಿಂಗ್ ಮಾಹಿತಿ ಬೆಳಕಿಗೆ ..
1 ಮಾತ್ರೆ ಸುಮಾರು 40 ಗಂಟೆಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತದೆ..
ಈ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವಿಸುತ್ತಿರುವುದು ಆತಂಕಕಾರಿ..
ಈ ಮಾತ್ರೆಯಿಂದ ಗಂಭೀರ ಆರೋಗ್ಯ ಸಮಸ್ಯೆ..
ಲಕ್ನೋ: ಇನ್ನೇನು ಕೆಲವೇ ದಿನಗಳಲ್ಲಿ 10ನೇ ತರಗತಿ ಪರೀಕ್ಷೆ ನಡೆಯುತ್ತದೆ. ಈ ಸಮಯದಲ್ಲಿ ನಿದ್ದೆ ಬರಬಾರದೆಂದು ಶಾಲಾ ಮಕ್ಕಳು ಭಯೋತ್ಪಾದಕರು ತೆಗೆದುಕೊಳ್ಳುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ವಿಚಾರವೊಂದು ಬಯಲಾಗಿದೆ.
ಈ ಸಂಬಂಧ ವೈದ್ಯ ಲೋಕ ಕೂಡ ಆತಂಕ ವ್ಯಕ್ತಪಡಿಸಿದ್ದು, ಇಂತಹ ಮಾತ್ರೆಗಳನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.
ಬೆಳಕಿಗೆ ಬಂದಿದ್ದು ಹೇಗೆ?: ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈಕೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳು ಊದಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ವಿದ್ಯಾರ್ಥಿನಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ.
ಮಂಗಳೂರು: ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ, ಭಾಷಾತಜ್ಞ ಕೆ.ಟಿ.ಗಟ್ಟಿ ನಿಧನ – Vishwanews24
ಇತ್ತ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾದ ಬಳಿಕ ಪೋಷಕರು ಆಕೆ ಓದುತ್ತಿದ್ದ ಕೋಣೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಮಾತ್ರೆಗಳು ತುಂಬಿದ ಬಾಟ್ಲಿಯೊಂದು ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಪೋಷಕರು ಮಾತ್ರೆಗಳನ್ನು ವೈದ್ಯರ ಬಳಿ ತೋರಿಸಿದ್ದಾರೆ. ಆಗ ವೈದ್ಯರು, ಇದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪೋಷಕರು ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಆಕೆಯೂ ಒಪ್ಪಿಕೊಂಡಿದ್ದಾಳೆ. ಪರೀಕ್ಷೆಯ ಸಮಯದಲ್ಲಿ ರಾತ್ರಿಯಿಡೀ ಎಚ್ಚರದಿಂದ ಇರಲು ಈ ಮಾತ್ರೆ ಸೇವಿಸುತ್ತಿದ್ದೆ ಎಂದಿದ್ದಾಳೆ. ಇದು ವೈದ್ಯರು ಹಾಗೂ ಪೋಷಕರನ್ನು ದಿಗ್ಭ್ರಮೆಗೊಳಿಸಿದೆ.
ಏನಿದು ನಿದ್ರೆ ತಡೆಯುವ ಮಾತ್ರೆ?: ಒಂದು ಮಾತ್ರೆ ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಮಾತ್ರೆಗಳನ್ನು ಉಗ್ರರು ತೆಗೆದುಕೊಳ್ಳುತ್ತಾರೆ. ಭಯೋತ್ಪಾದಕ ದಾಳಿ ವೇಳೆ ನಿದ್ರೆ ತಪ್ಪಿಸಲು ಉಗ್ರರು ಇಂತಹ ಮಾತ್ರೆಗಳನ್ನು ನುಂಗಿ ಕಾರ್ಯಾಚರಣೆ ಮಾಡುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಸಿಗಲ್ಲ. ಆದರೆ ಕಳ್ಳ ಮಾರ್ಗದಲ್ಲಿ ಬೇರೆ ಬೇರೆ ಮಾತ್ರೆಗಳ ಹೆಸರಿನಲ್ಲಿ ಭಾರತಕ್ಕೆ ಸಾಗಿಸಲಾಗುತ್ತದೆ.
ಏ. 15ರಿಂದ 23ರವರೆಗೆ ವಿಶ್ವ ವಿಖ್ಯಾತ, ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ – Vishwanews24
ಇದೀಗ ಈ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವಿಸುತ್ತಿರುವುದು ಆತಂಕಕಾರಿಯಾಗಿದೆ. ಪರೀಕ್ಷೆಗಳ ಸಮಯಗಳಲ್ಲಿ ಇಂತಹ ಮಾತ್ರೆಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ ಎಂದು ಔಷಧ ವ್ಯಾಪಾರಿಗಳು ಹೇಳುತ್ತಾರೆ. 26/11 ಮುಂಬೈ ದಾಳಿ ವೇಳೆ ಮೊದಲ ಬಾರಿ ಈ ಮಾತ್ರೆಗಳು ಪತ್ತೆಯಾಗಿದ್ದವು.
