ಪಶ್ಚಿಮಬಂಗಾಳ ಚುನಾವಣಾ ಪ್ರಚಾರ: ನಟ ಮಿಥುನ್ ಚಕ್ರವರ್ತಿಗೆ “ವೈ ಪ್ಲಸ್” ಭದ್ರತೆ -Vishwanews24

Featured, ರಾಷ್ಟ್ರ ನ್ಯೂಸ್

ಪಶ್ಚಿಮಬಂಗಾಳ ಚುನಾವಣಾ ಪ್ರಚಾರ: ನಟ ಮಿಥುನ್ ಚಕ್ರವರ್ತಿಗೆ “ವೈ ಪ್ಲಸ್” ಭದ್ರತೆ -Vishwanews24

ನವದೆಹಲಿ, : ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಬಾಲಿವುಡ್‌ನ ಹಿರಿಯ ನಟ ಮಿಥುನ್‌ ಚಕ್ರವರ್ತಿಗೆ ವೈ ಪ್ಲಸ್‌‌‌ ಭದ್ರತೆ ನೀಡಿರುವುದಾಗಿ ವರದಿಯಾಗಿದೆ.

ಮಿಥುನ್ ಚಕ್ರವರ್ತಿ ಅವರಿಗೆ ಪಶ್ಚಿಮಬಂಗಾಳದ ಚುನಾವಣೆ ಹಿನ್ನೆಲೆ ಸಿಐಎಸ್‌‌ಎಫ್‌‌ ಭದ್ರತೆಯನ್ನು ನೀಡಲಿದ್ದು, ಇದನ್ನು ಎಸ್‌‌‌ಎಸ್‌ಜಿ ಎಂದು ಕೂಡಾ ಕರೆಯುತ್ತಾರೆ.

ಉಡುಪಿ:ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸಿಎಂ ಬಳಿ ನಿಯೋಗ ; ಬ್ಯಾರಿ ಭಾಷೆ ಉಳಿವಿಗೆ ಲಿಪಿ ಅಗತ್ಯ: ರಹೀಂ ಉಚ್ಚಿಲ್ -Vishwanews24

ಮಿಥುನ್‌ ಚಕ್ರವರ್ತಿ ಅವರು, ಕೋಲ್ಕತ್ತಾದ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆದ ಬಿಜೆಪಿ ಬೃಹತ್‌ ಸಮಾವೇಶದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

“ಪಶ್ಚಿಮ ಬಂಗಾಳ ಚುನಾವಣಾ ಹಿನ್ನೆಲೆ ಪ್ರಚಾರ ನಡೆಸುವ ವೇಳೆ ಮಿಥುನ್‌ ಚಕ್ರವರ್ತಿ ಅವರಿಗೆ ವೈ ಪ್ಲಸ್‌‌ ಹಾಗೂ ಸಿಐಎಸ್‌ಎಫ್‌ ಕಮಾಂಡೋ ಭದ್ರತೆಯನ್ನು ನೀಡಲಿದೆ” ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿರುವುದಾಗಿ ವರದಿ ಹೇಳಿದೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಧು ಬಂಗಾರಪ್ಪ ; ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ -Vishwanews24

ಪಶ್ಚಿಮಬಂಗಾಳದಲ್ಲಿ ಮಾರ್ಚ್ 27ರಿಂದ ಎಪ್ರಿಲ್‌ 29ರವರೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಜಾರಕಿಹೊಳಿ ಸಿಡಿ ಪ್ರಕರಣ : ಪೊಲೀಸರಿಗೆ ತನಿಖೆಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದೇವೆ : ಬಸವರಾಜ ಬೊಮ್ಮಾಯಿ -Vishwanews24