ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಕಂಪಿಸಿದ ಭೂಮಿ : ಜನರಲ್ಲಿ ಆತಂಕ – viahwanews24

Featured, ರಾಷ್ಟ್ರ ನ್ಯೂಸ್

ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಕಂಪಿಸಿದ ಭೂಮಿ : ಜನರಲ್ಲಿ ಆತಂಕ

ನವದೆಹಲಿ: ಜಪಾನ್‌ನಲ್ಲಿ  ಸಂಭವಿಸಿದ ಭಾರಿ ಭೂಕಂಪದಿಂದಾಗಿ ಜಗತ್ತು ಬೆಚ್ಚಿಬಿದ್ದಿದೆ. ಇದೇ ಹೊತ್ತಲ್ಲಿ ಭಾರತದ ಪಶ್ಚಿಮ ಬಂಗಾಳ  ಹಾಗೂ ಮಣಿಪುರದಲ್ಲಿ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಬಾಂಗ್ಲಾ ಮತ್ತು ಮಾಯಾನ್ಮಾರ್ ಗಡಿಯಲ್ಲಿ ಭೂಮಿ ಕಂಪಿಸಿದೆ. 1 ಗಂಟೆ ಅಂತರದಲ್ಲಿ ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಭೂಕಂಪನವಾಗಿದೆ. ಪಶ್ಚಿಮ ಬಂಗಾಳದಲ್ಲಿ ರಾತ್ರಿ 10:55 ರ ಸುಮಾರಿಗೆ 3.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಉದ್ದ 89.82 ಕಿಮೀ, 5 ಕಿಮೀ ಆಳದಲ್ಲಿ ಕಂಪನವಾಗಿದೆ.

ಅಂತೆಯೇ ಮಣಿಪುರದಲ್ಲಿ 12 ಗಂಟೆ 1 ನಿಮಿಷಕ್ಕೆ ಭೂಕಂಪನವಾಗಿದೆ. ಮಣಿಪುರದ ಕಾಂಜೊಂಗ್‌ನಲ್ಲಿ ಉದ್ದ 94.31 ಕಿಮೀ, 35 ಕಿಲೋಮೀಟರ್ ಆಳದಲ್ಲಿ 3.0 ತೀವ್ರತೆಯಲ್ಲಿ ಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

Leave a Reply