Featured

ಪಾಕಿಸ್ಥಾನದ ಮೊತ್ತ ಮೊದಲ ಹಿಂದೂ ನ್ಯಾಯಾಧೀಶೆ ಸುಮನ್‌ ಕುಮಾರಿ ಬೊದಾನಿ – Vishwanews24

ಇಸ್ಲಾಮಾಬಾದ್‌ : ಸುಮನ್‌ ಕುಮಾರಿ ಬೊದಾನಿ ಅವರು ಪಾಕಿಸ್ಥಾನದ ಮೊತ್ತ ಮೊದಲ ಹಿಂದು ನ್ಯಾಯಾಧೀಶೆಯಾಗಿದ್ದಾರೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ಥಾನದ ಕಂಬರ್‌ – ಶಹದಾಕೋಟ್‌ನ ನಿವಾಸಿಯಾಗಿರುವ ಸುಮನ್‌ ಅವರು ತಮ್ಮ ಹುಟ್ಟೂರ ಜಿಲ್ಲೆಯಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ.

ಪಾಕಿಸ್ಥಾನದ ಕಂಬರ್‌ – ಶಶಹದಾದ್ಕೋಟ್ ಜಿಲ್ಲೆಯ ಮೂಲದವರಾದ ಸುಮನ್‌ ಅವರು ಅದೇ ಜಿಲ್ಲೆಯಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ. ಹೈದರಾಬಾದ್ ನಲ್ಲಿ ಎಲ್ಎಲ್ ಬಿ ಪೂರ್ಣಗೊಳಿಸಿರುವ ಸುಮನ್ ಕುಮಾರಿ, ಕರಾಚಿಯ ಸ್ಜಬಿಸ್ಟ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದ್ದಾರೆ.

ತಂದೆ  ಪವನ್‌ ಕುಮಾರ್‌ ಬೊದಾನಿ ಹೇಳುವ ಪ್ರಕಾರ  “ಸುಮನ್‌ ಗೆ ಹುಟ್ಟೂರ ಜಿಲ್ಲೆಯಲ್ಲಿನ ಬಡವರಿಗೆ ಉಚಿತ ಕಾನೂನು ನೆರವು ನೀಡುವಾಸೆ ಇದೆ. ಆಕೆ ತುಂಬಾ ಸವಾಲಿನ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಹಾಗಿದ್ದರೂ ತನ್ನ ಕಠಿನ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಆಕೆ ತನ್ನ ಸೇವಾ ಕ್ಷೇತ್ರದಲ್ಲಿ ಹೊಸ ಹೊಸ ಎತ್ತರಗಳನ್ನು ಕಾಣುವ ವಿಶ್ವಾಸವಿದೆ’.

ಪಾಕಿಸ್ಥಾನದ ಹಿಂದು ಸಮುದಾಯದ ಮೊತ್ತ ಮೊದಲ ನ್ಯಾಯಾಧೀಶರಾಗಿರುವ ರಾಣಾ ಭಗವಾನ್‌ದಾಸ್‌ ಅವರು 2005ರಿಂದ 2007ರ ವರೆಗಿನ ಅವಧಿಯಲ್ಲಿ ಪಾಕಿಸ್ಥಾನದ ಚೀಫ್ ಜಸ್ಟಿಸ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ಪಾಕಿಸ್ಥಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಗಳು ಕೇವಲ ಶೇ.2ರಷ್ಟು ಇದ್ದಾರೆ. ಅಂತೆಯೇ ಪಾಕಿಸ್ಥಾನದಲ್ಲಿ ಇಸ್ಲಾಂ ಬಳಿಕದ ಅತೀ ದೊಡ್ಡ ಧರ್ಮವೇ ಹಿಂದು ಧರ್ಮವಾಗಿದೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago