ಪಾವಗಡ  ಬಸ್ ದುರಂತ ಪ್ರಕರಣ:  ಖಾಸಗಿ ಬಸ್‌‌ಗಳ ಪರವಾನಗಿ ರದ್ದು: ಸಚಿವ ಶ್ರೀರಾಮುಲು – Vishwanews24

Featured, ರಾಜ್ಯ ನ್ಯೂಸ್

ಪಾವಗಡ  ಬಸ್ ದುರಂತ ಪ್ರಕರಣ:  ಖಾಸಗಿ ಬಸ್‌‌ಗಳ ಪರವಾನಗಿ ರದ್ದು: ಸಚಿವ ಶ್ರೀರಾಮುಲು – Vishwanews24

ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಎಂಟು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾವಗಡದಲ್ಲಿ ಖಾಸಗಿ ಬಸ್​ಗಳ ಪರವಾನಗಿ ರದ್ದು ಮಾಡಲು ಸೂಚನೆ ನೀಡಿದ್ದೇನೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾವಗಡದಲ್ಲಿ ಖಾಸಗಿ ಬಸ್ ಗಳ ಪರವಾನಗಿಯನ್ನ ರದ್ದು ಮಾಡಲು ಸೂಚನೆ ನೀಡಿದ್ದು, ಇಲ್ಲಿ ಸಾರಿಗೆ ಬಸ್ ಓಡಿಸಲು ಕ್ರಮ ಕೈಗೊಳ್ಳುತ್ತೇವೆ. ಆರ್​​ಟಿಒ ಸಿಬ್ಬಂದಿ ವಿರುದ್ಧ ಕ್ರಮ‌ ಕೈಗೊಂಡು ಅಮಾನತು ಮಾಡುತ್ತೇವೆ ಎಂದರು.

ಇನ್ನು ಇಂದು ನಡೆದ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಕೊಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮಂಗಳೂರು : ನಾನು ಭಗವದ್ಗೀತೆ, ಬೈಬಲ್, ಕುರಾನ್ ಯಾವುದರ ವಿರೋಧಿಯೂ ಅಲ್ಲ : ಸಿದ್ದರಾಮಯ್ಯ – Vishwanews24

Leave a Reply