ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣ : ಸಿಎಂ ಯಾರನ್ನು ರಕ್ಷಣೆ ಮಾಡುತ್ತಾರೆ ಮಾಡಲಿ ; ಆನಂತರ ಮಾತನಾಡುತ್ತೇವೆ : ಡಿ.ಕೆ.ಶಿ – Vishwnaews24

Featured, ರಾಜ್ಯ ನ್ಯೂಸ್

ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣ : ಸಿಎಂ ಯಾರನ್ನು ರಕ್ಷಣೆ ಮಾಡುತ್ತಾರೆ ಮಾಡಲಿ ; ಆನಂತರ ಮಾತನಾಡುತ್ತೇವೆ : ಡಿ.ಕೆ.ಶಿ

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಯಾರನ್ನು ರಕ್ಷಣೆ ಮಾಡುತ್ತಾರೆ ಮಾಡಲಿ. ಆನಂತರ ಮಾತನಾಡುತ್ತೇವೆ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಗೌಡ ಅವರನ್ನು ಈ ಹಿಂದೆ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ಸಚಿವರ ಪ್ರಭಾವಕ್ಕೆ ಮಣಿದು ಬಿಟ್ಟು ಕಳುಹಿಸಿದ್ದು, ಈಗ ಮತ್ತೆ ವಿಚಾರಣೆ ಮಾಡಿ ಬಂಧಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಬರಿ ಇದು ಒಂದು ಮಾಹಿತಿಯಲ್ಲ ಸಾಕಷ್ಟು ಮಾಹಿತಿ, ದಾಖಲೆಗಳು ನಮ್ಮ ಬಳಿ ಇದೆ. ಪಿಎಸ್‌ಐ ಅಕ್ರಮದಲ್ಲಿ ಸ್ವತಃ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಗರಣಕ್ಕೆ ಕಾರಣರಾದವರ ವಿರುದ್ಧ ಮೊದಲು ಕೇಸ್ ಹಾಕಲಿ ಒಂದು ವೇಳೆ ಸರ್ಕಾರ ಕೇಸ್ ಹಾಕಿ ಕ್ರಮ ಕೈಗೊಳ್ಳದಿದ್ದರೆ ನಾವು ಸುದ್ದಿಗೋಷ್ಠಿ ನಡೆಸಿ ಏನು ಮಾಡಬೇಕೋ ಮಾಡುತ್ತೇವೆ ಎಂದಿದ್ದಾರೆ.

ಆರ್‌ಎಸ್‌ಎಸ್‌, ಬಿಜೆಪಿಯವರೇ ಈ ದೇಶಕ್ಕೆ ನಿಮ್ಮ ಕೊಡುಗೆ ಏನು ? :ಉಗ್ರಪ್ಪ  – Vishwnaews24

Leave a Reply