Featured

ಪಿಓಪಿ ಗಣೇಶ ಮಾರಾಟ, ತಯಾರಿಕೆ ಕಂಡುಬಂದಲ್ಲಿ ಕ್ರಿಮಿನಲ್ ಕೇಸ್ – vishwanews24

ಪಿಓಪಿ ಗಣೇಶ ಮಾರಾಟ ಹಾಗೂ ತಯಾರಿಕೆ ಸಂಪೂರ್ಣ ನಿಷೇಧ

ನಿಗದಿಯಾದ ಜಾಗ ಬಿಟ್ಟು ಬೇರೆಡೆ ಗಣೇಶ ವಿರ್ಸಜಿಸಿದ್ರೆ ಕ್ರಿಮಿನಲ್ ಕೇಸ್

ಜಿಬಿಎಯಿಂದ ಗಣೇಶ ಹಬ್ಬಕ್ಕೆ ಸುತ್ತೋಲೆ

ಬೆಂಗಳೂರು: ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.

ಪಿಓಪಿ ಗಣೇಶ ಮಾರಾಟ ಹಾಗೂ ತಯಾರಿಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಒಂದೊಮ್ಮೆ ಯಾರಾದರೂ ಮಾರಾಟ, ತಯಾರಿಕೆ ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಚ್ಚರಿಕೆ ನೀಡಿದೆ.

ಗಣೇಶ ಕೂರಿಸಲು ಆಯೋಜಕರು ಅನುಮತಿ ಪಡೆಯಲು ವಾರ್ಡ್ವಾರು ನೋಡಲ್ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಅರ್ಜಿ ಬಂದ ಒಂದೇ ದಿನದಲ್ಲಿ ಅರ್ಜಿ ಪರಿಶೀಲಿಸಿ ಅನುಮತಿ ನೀಡಲಾಗುವುದು. ಸಿಂಗಲ್ ವಿಂಡೋ ಮೂಲಕ ಅರ್ಜಿ ವಿಲೇವಾರಿಗೆ ಜಿಬಿಎ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮನೆಯಲ್ಲೇ ವಿಸರ್ಜನೆ ಆಗುವ ಮೂರ್ತಿಗಳ ಬಾಕಿ ಮಣ್ಣನ್ನು ಮನೆಯಲ್ಲೇ ವಿಲೇವಾರಿ ಮಾಡಲು ಸೂಚಿಸಿದ್ದು, ಹೂಕುಂಡ ಅಥವಾ ಕೈತೋಟಗಳಿಗೆ ಮಣ್ಣು ಮರುಬಳಕೆಗೆ ಮನವಿ ಮಾಡಲಾಗಿದೆ. ಜೊತೆಗೆ ಜಿಬಿಎ ನಿಗದಿ ಮಾಡಿದ ಜಾಗ ಹೊರತುಪಡಿಸಿ ಇತರೆ ಜಾಗದಲ್ಲಿ ವಿಸರ್ಜನೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದೆ.

ಇನ್ನೂ ಗಣೇಶ ಹಬ್ಬ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಕೆಯೂ ಸಂಪೂರ್ಣ ನಿಷೇಧಿಸಲಾಗಿದೆ. ಒಂದೊಮ್ಮೆ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಆಯೋಜಕರಿಗೆ ದಂಡ ವಿಧಿಸಲಾಗುವುದು. ಪೆಂಡಾಲ್ ಅಳವಡಿಕೆ ಹಾಗೂ ಧ್ವನಿವರ್ಧಕಗಳ ಬಳಕೆಗೆ ಶುಲ್ಕ ಪಾವತಿ ಕಡ್ಡಾಯವಾಗಿದ್ದು, ಸ್ಥಳೀಯ ಪೊಲೀಸ್ ಠಾಣೆ ಅಥವಾ ಬೆಂಗಳೂರು ಒನ್‌ನಲ್ಲಿ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಯ ರಸೀದಿ ಅರ್ಜಿ ಜೊತೆ ಲಗತ್ತಿಸಿದರೆ ಮಾತ್ರ ಜಿಬಿಎಯಿಂದ ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಅನುಮತಿ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

Vishwa News 24

Recent Posts

ಸಚಿವ ಸತೀಶ್‌ ಜಾರಕಿಹೊಳಿ ನಿವಾಸಗಳ ಮೇಲೆ ಇ.ಡಿ ದಾಳಿ – vishwanews24

ಅಬಕಾರಿ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ  ಸಚಿವ ಸತೀಶ್‌ ಜಾರಕಿಹೊಳಿ ನಿವಾಸಗಳ ಮೇಲೆ ಇ.ಡಿ ದಾಳಿ ಬೆಂಗಳೂರು:…

35 seconds ago

ಕಾಪು: ಸೆ.9ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ – vishwanews24

ಕಾಪು: ಸೆ.9ರಂದು  ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ ಕಾಪು: ಪೆರ್ಡೂರು ಕೇಂದ್ರ ಕಚೇರಿಯನ್ನು ಹೊಂದಿರುವ…

18 hours ago

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ – vishwanews24

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ…

19 hours ago

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ – vishwanews24

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.…

20 hours ago

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾ: ಸಿಎಂ ಡಿ.ಕೆ.ಶಿ ಸೂಚನೆ – vishwanews24

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಸೂಚನೆ ಬೆಂಗಳೂರು: ಕಲಬುರಗಿ ಜೇವರ್ಗಿ ತಾಲ್ಲೂಕಿನ…

20 hours ago

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ ಆಗ್ರಹ – vishwanews24

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ CWC ಗೆ ಎಪಿಸಿಆರ್ ನಿಂದ ದೂರು ಉಡುಪಿ: ಉಡುಪಿ…

20 hours ago