Featured

ಕಾಪು: ಸೆ.9ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ – vishwanews24

ಕಾಪು: ಸೆ.9ರಂದು  ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ

ಕಾಪು: ಪೆರ್ಡೂರು ಕೇಂದ್ರ ಕಚೇರಿಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.)ದ 8ನೇ ಶಾಖೆಯ ಶುಭಾರಂಭ ಸಮಾರಂಭ ಸೆ.9ರಂದು ಬೆಳಗ್ಗೆ 10 ಗಂಟೆಗೆ ಕಾಪುವಿನ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.

ಬ್ಯಾಂಕಿಂಗ್ ಕ್ಷೇತ್ರದ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಹವಾನಿಯಂತ್ರಿತ ಶಾಖೆ ಇದಾಗಿದ್ದು, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದ ಮುಖ್ಯರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾರಂಭ ಮಾಡಲಿದೆ.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಪಕ್ಕಾಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಬಿಲ್ಲವರ ಸಹಾಯಕರ ಸಂಘದ ಅಧ್ಯಕ್ಷ ವಿಕ್ರಮ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ.ಆರ್. ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

1958ರಲ್ಲಿ ಸ್ಥಾಪನೆಯಾದ ಸಂಸ್ಥೆ ಪೆರ್ಡೂರು, ಉಡುಪಿ, ಬ್ರಹ್ಮಾವರ, ಕುಂದಾಪುರ, ಶಿರ್ವ-ಮಂಚಕಲ್, ಸಿದ್ದಾಪುರ ಹಾಗೂ ಹೆಬ್ರಿಯಲ್ಲಿ ಶಾಖೆಗಳನ್ನು ಹೊಂದಿದ್ದು, ಇದೀಗ ಕಾಪುವಿನಲ್ಲಿ 8ನೇ ಶಾಖೆಯನ್ನು ಆರಂಭಿಸುತ್ತಿದೆ. ರಾಜ್ಯ ಮಟ್ಟದ ಅಮೃತಮ ಸಹಕಾರ ಸಂಘ ಪ್ರಶಸ್ತಿ (2017-18) ಹಾಗೂ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿ (2025-26) ಸೇರಿದಂತೆ ವಿವಿಧ ಗೌರವಗಳಿಗೆ ಸಂಸ್ಥೆ ಪಾತ್ರವಾಗಿದೆ.

ಶಾಖೆಯ ಶುಭಾರಂಭ ಸಮಾರಂಭಕ್ಕೆ ಸಾರ್ವಜನಿಕರು, ಗ್ರಾಹಕರು ಹಾಗೂ ಸಹಕಾರ ಕ್ಷೇತ್ರದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಮನವಿ ಮಾಡಿದೆ.

Vishwa News 24

Recent Posts

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ – vishwanews24

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ…

3 hours ago

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ – vishwanews24

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.…

3 hours ago

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾ: ಸಿಎಂ ಡಿ.ಕೆ.ಶಿ ಸೂಚನೆ – vishwanews24

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಸೂಚನೆ ಬೆಂಗಳೂರು: ಕಲಬುರಗಿ ಜೇವರ್ಗಿ ತಾಲ್ಲೂಕಿನ…

4 hours ago

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ ಆಗ್ರಹ – vishwanews24

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ CWC ಗೆ ಎಪಿಸಿಆರ್ ನಿಂದ ದೂರು ಉಡುಪಿ: ಉಡುಪಿ…

4 hours ago

ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ: ಸಚಿವ ಯುಟಿ ಖಾದರ್ – vishwanews24

ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ.. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ…

5 hours ago

108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ : ಅಶೋಕ್​​ – vishwanews24

108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ : ಅಶೋಕ್​​ ಬೆಂಗಳೂರು: ವಿವಿಧ ಬೇಡಿಕೆಗಳಿಗೆ…

5 hours ago