ಪುತ್ತೂರು : ಅಕ್ಷಯ್ ಕಲ್ಲೇಗ ಮರ್ಡರ್ ರಿವೇಂಜ್ ಗೆ ಸ್ಕೇಚ್ – ನಾಲ್ವರು ಪೊಲೀಸ್ ವಶಕ್ಕೆ – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು : ಅಕ್ಷಯ್ ಕಲ್ಲೇಗ ಮರ್ಡರ್ ರಿವೇಂಜ್ ಗೆ ಸ್ಕೇಚ್ – ನಾಲ್ವರು ಪೊಲೀಸ್ ವಶಕ್ಕೆ

ಪುತ್ತೂರು : ಅಕ್ಷಯ್ ಕಲ್ಲೇಗ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿವೇಂಜ್ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುತ್ತೂರು ಪೊಲೀಸರು ಅರೆಸ್ಟ್ ಮಾಡಿದ್ದು, ಆಗಬಹುದಾಗಿದ್ದ ಕೃತ್ಯವನ್ನು ಪೊಲೀಸರು ತಡೆದಿದ್ದಾರೆ. ಬಂಧಿತರನ್ನು ಬಂಟ್ವಾಳ ನಿವಾಸಿ ಕಿಶೋರ್‌ ಕಲ್ಲಡ್ಕ (36), ಪುತ್ತೂರಿನ ಮನೋಜ್‌ (23), ಆಶಿಕ್‌ (28), ಸನತ್‌ ಕುಮಾರ್‌ (24) ಎಂದು ಗುರುತಿಸಲಾಗಿದೆ.

ಬಂಧಿತರು ಅಕ್ಷಯ್ ಕಲ್ಲೆಗ ಕೊಲೆ ಪ್ರಕರಣದ ಆರೋಪಿ ಮನೀಶ್ ಸಹೋದರ ಮನೋಜ್ ನ ಮೇಲೆ ಸೇಡು ತೀರಿಸಿಕೊಳ್ಳಲು ಹಾಕಿದ್ದರು. ಈ ಮೊದಲು ಮನೋಜ್ ಗೆ ಬೆದರಿಕೆ ಕರೆ ಮಾಡಿರುವ ಆರೋಪಿಗಳು ನಿನ್ನ ತಮ್ಮ ಮನೀಶ್ ಹಾಗೂ ಉಳಿದ ಆರೋಪಿಗಳು ಜೈಲಿನಿದ್ದಾರೆ, ಆದ್ರೆ ನಿನ್ನನ್ನ ಬಿಡಲ್ಲ ಎಂದು ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದರು.

ಸೌಜನ್ಯಾ ಪ್ರಕರಣ : ಮರು ತನಿಖೆಗೆ ಆದೇಶಿಸುವಂತೆ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌  – Vishwanews24

ಈ ಹಿನ್ನಲೆ ಮನೋಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ಮನೋಜ್ ಚಲನವಲನವನ್ನ ಗಮನಿಸುತ್ತಿದ್ದ ದುಷ್ಕರ್ಮಿಗಳ ತಂಡ, ಪುತ್ತೂರಿನ ಮುಕ್ರಂಪಾಡಿಯಲ್ಲಿ ಎಂಬಲ್ಲಿ ಕಾರಿನಲ್ಲಿ ತಲ್ವಾರ್ ಸಹಿತ ಮನೋಜ್ ಮೇಲೆ ರಿವೆಂಜ್ ತಿರಿಸಿಕೊಳ್ಳಲು ಆಗಮಿಸಿದ್ದರು. ಈ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

Leave a Reply