ಪುತ್ತೂರು: ನಗರಸಭಾ ಸದಸ್ಯ ನೇಣಿಗೆ ಶರಣು – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ನಗರಸಭಾ ಸದಸ್ಯ ನೇಣಿಗೆ ಶರಣು

ಪುತ್ತೂರು: ನಗರಸಭಾ ಸದಸ್ಯರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮೃತರನ್ನು ಪುತ್ತೂರು ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ಎಂದು ಗುರುತಿಸಲಾಗಿದೆ.

ಶಿವರಾಮ್ ಸಪಲ್ಯ ರವರು ಊರಮಾಲು ನಿವಾಸಿಯಾಗಿದ್ದು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದದ್ದಾರೆ ಎನ್ನಲಾಗಿದೆ.

ಇನ್ನು ಪತಿಯು ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಪತ್ನಿಯು ಹತ್ತಿರದ ಮನೆಯವರಲ್ಲಿ ಮನೆ ಬಳಿ ತೆರಳುವಂತೆ ತಿಳಿಸಿದ್ದು, ಈ ವೇಳೆ ಅವರು ಮನೆ ಬಳಿ ತೆರಳಿ ನೋಡಿದಾಗ ಶಿವರಾಮ್ ರವರು ನೇಣು ಬಿಗಿದುಕೊಂಡಿದ್ದರು ಎಂದು ವರದಿಯಾಗಿದೆ.

ದಕ್ಷಿಣ ಕನ್ನಡ : ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡ್ , ಡೆಬಿಟ್- ಕ್ರೆಡಿಟ್ ಇಲ್ಲದ ಪ್ರಯೋಜನಕ್ಕೆ ಬಾರದ ವಿಸಿಟಿಂಗ್ ಕಾರ್ಡ್ ಇದ್ದಂತೆ : ಸಿಎಂ ಬೊಮ್ಮಾಯಿ – Vishwanews24

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply