ಪುತ್ತೂರು: ನಾವು ಹಿಂದೆಯೂ, ಇಂದೂ, ಮುಂದೆಯೂ ಬಿಜೆಪಿಯೇ : ಅರುಣ್ ಕುಮಾರ್ ಪುತ್ತಿಲ – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ನಾವು ಹಿಂದೆಯೂ, ಇಂದೂ, ಮುಂದೆಯೂ ಬಿಜೆಪಿಯೇ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಚುನಾವಣೆಯ ಫಲಿತಾಂಶದ ಬಳಿಕ ಅಣ್ಣಾಮಲೈ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜೀ ಸಂಪರ್ಕಿಸಿದ್ದಾರೆ. ಇದೆಲ್ಲಾ ಸರಿಯಾಗಬೇಕೆನ್ನುವ ನಿಟ್ಟಿನಲ್ಲಿ ಮಾತನಾಡಿದ್ದಾರೆ. ನಾವು ಹಿಂದೆಯೂ, ಇಂದೂ, ಮುಂದೆಯೂ ಬಿಜೆಪಿಯೇ ಎಂದು ಪುತ್ತೂರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು ತಿಳಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ ಮೋದಿಯವರ ಆದರ್ಶದ ಜೊತೆಗೆ ರಾಜಕಾರಣದಲ್ಲಿದ್ದೇವೆ. ತಪ್ಪು ಯಾರಿಂದಾಗಿದ್ದು ಎಂದು ಇಡೀ ಜಿಲ್ಲೆಯ ಜನತೆಗೆ ಗೊತ್ತಿದೆ. ಈಗಿನ ಸನ್ನಿವೇಶ ಮುಂದಿನ ದಿನಗಳಲ್ಲಿ ಸರಿಯಾಗುವ ನಿರೀಕ್ಷೆಯಿದೆ. ಪುತ್ತೂರಿನ ವಿದ್ಯಾಮಾನಗಳು ಇಡೀ ರಾಜ್ಯಕ್ಕೊಂದು ಸಂದೇಶವಾಗಿದೆ ಎಂದರು.

ಸಂಘಟನೆ ತೆಗೆದುಕೊಳ್ಳುವ ತೀರ್ಮಾನ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಸಂದರ್ಭ, ಸನ್ನಿವೇಶಕ್ಕನುಗುಣವಾಗಿ ತೀರ್ಮಾನ ಪ್ರಕಟಿಸುತ್ತೇವೆ ಎಂದು ಪುತ್ತೂರಿನಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

ಪುತ್ತೂರಿನಲ್ಲಿ ಯತ್ನಾಳ್ – ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರ ಆರೋಗ್ಯ ವಿಚಾರಣೆ – Vishwanews24

Leave a Reply