ಪುತ್ತೂರು : ಬಿಜೆಪಿ ಮುಖಂಡರ ಬ್ಯಾನರ್ ಗಳಿಗೆ ಚಪ್ಪಲಿ ಹಾರ ಹಾಕುವ ನೀಚ ಕೃತ್ಯ ಕಾಂಗ್ರೆಸ್ ಕಾರ್ಯಕರ್ತರು ಮಾಡುವುದಿಲ್ಲ: ಅಶೋಕ್ ಕುಮಾರ್ ರೈ – Vishwanews24
ಪುತ್ತೂರು : ಬಿಜೆಪಿ ಮುಖಂಡರ ಬ್ಯಾನರ್ ಗಳಿಗೆ ಚಪ್ಪಲಿ ಹಾರ ಹಾಕುವ ನೀಚ ಕೃತ್ಯ ಕಾಂಗ್ರೆಸ್ ಕಾರ್ಯಕರ್ತರು ಮಾಡುವುದಿಲ್ಲ: ಅಶೋಕ್ ಕುಮಾರ್ ರೈ
ಪುತ್ತೂರು : ಬಿಜೆಪಿ ಮುಖಂಡರ ಬ್ಯಾನರ್ ಗಳಿಗೆ ಚಪ್ಪಲಿ ಹಾರ ಹಾಕುವ ನೀಚ ಕೃತ್ಯವನ್ನು ಕಾಂಗ್ರೇಸ್ ಕಾರ್ಯಕರ್ತರು ಮಾಡುವುದಿಲ್ಲ, ನಮಗೆ ಯಾರ ಮೇಲೆ ದ್ವೇಷವೂ ಇಲ್ಲ ಎಂದು ನೂತನ ಶಾಸಕ ಅಶೋಕ್ಕುಮಾರ್ ರೈ ಅವರು ತಿಳಿಸಿದ್ದಾರೆ.
ಪುತ್ತೂರಿನ ಬಸ್ ನಿಲ್ದಾಣದ ಬಳಿ ಬಿಜೆಪಿ ಮುಖಂಡರ ಭಾವಚಿತ್ರ ಇರುವ ಬ್ಯಾನರ್ ಅಳವಡಿಸಿ, ಅದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಸುತ್ತಲಿನ ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಶಾಸಕ ಅಶೋಕ್ಕುಮಾರ್ ರೈ ಕೋಡಿಂಬಾಡಿ ಆಗ್ರಹಿಸಿದ್ದಾರೆ.
ಕೊಣಾಜೆ: ಮಗಳ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ನಿಧನ – Vishwanews24
ಘಟನೆಯ ಖಂಡಿಸಿ ಬಿಜೆಪಿಯವರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಶಾಸರು, ಪರೋಕ್ಷವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡಿದ್ದು ಅದನ್ನು ಖಂಡಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸಿಗೆ ಮತದಾರರು ನೀಡಿರುವ ಬೆಂಬಲವನ್ನು ಕಂಡು ಬಿಜೆಪಿಗೆ ಆಘಾತವಾಗಿದೆ. ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ಬಿಜೆಪಿಗರ ಕಾಯಕವಾಗಿದೆ. ಅವರದ್ದೇ ಸರ್ಕಾರ ಇರುವಾಗಲೂ ಪ್ರತಿಭಟನೆ ಮಾಡಿದ್ದರು. ಈಗಲೂ ಮಾಡುತ್ತಲೇ ಇದ್ದಾರೆ ಎಂದು ಅವರು ಟೀಕಿಸಿದ್ದಾರೆ.
Kerala: ಮದರಸಾದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತೆ: ಕಿರುಕುಳದ ಆರೋಪ – Vishwanews24
