ಪುತ್ತೂರು: ಯುವತಿಗೆ ಚೂರಿ ಇರಿದು ಕೊಲೆಗೈದ ಪ್ರಕರಣ :: ಆರೋಪಿಯ ಬಂಧನ – Vishwanews24
ಪುತ್ತೂರು: ಪ್ರೇಮ ಪ್ರಕರಣ – ಯುವತಿಗೆ ಚೂರಿ ಇರಿದು ಕೊಲೆಗೈದ ಆರೋಪಿಯ ಬಂಧನ
ಪುತ್ತೂರು: ಮುಂಡೂರು ಗ್ರಾಮದ ಕಂಪದಲ್ಲಿ ಮನೆಗೆ ನುಗ್ಗಿ ಚೂರಿ ಇರಿದು ಯುವತಿ ಜಯಶ್ರಿ (23) ಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕನಕಮಜಲು ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ.
ಪುತ್ತೂರು: ಮನೆಯಂಗಳದಲ್ಲೇ ಚೂರಿ ಇರಿದು ಆರೋಪಿ ಪರಾರಿ ; ಯುವತಿ ಮೃತ್ಯು – Vishwnaews24
ಕೃತ್ಯಕ್ಕೆ ಪ್ರೇಮ ಪ್ರಕರಣವೇ ಕಾರಣ ಎನ್ನಲಾಗಿದೆ. ಸಂಬಂಧಿಕನಾದ ಆರೋಪಿಯೂ ಜಯಶ್ರಿ ಮನೆಗೆ ಬಂದು ಹೋಗುತ್ತಿದ್ದು , ಆತನ ನಡವಳಿಕೆಯಿಂದ ಬೇಸತ್ತು ಜಯಶ್ರೀ ದೂರ ಸರಿದಿದ್ದಳು ಎನ್ನಲಾಗಿದ್ದು , ಇದೇ ಸಿಟ್ಟಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವುದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥ ಲೋಕಾರ್ಪಣೆಗೆ ಸಿದ್ಧ – Vishwanews24
