Featured

ಪುತ್ತೂರು : ಶಕುಂತಳಾ ಶೆಟ್ಟಿಗೆ ಟಿಕೇಟ್ ನಿರಾಕರಿಸಿದರೆ ಸಾಮೂಹಿಕ ರಾಜೀನಾಮೆ: ಮಹಿಳಾ ಕಾಂಗ್ರೆಸ್ ಎಚ್ಚರಿಕೆ – Vishwanews24

ಪುತ್ತೂರು : ಶಕುಂತಳಾ ಶೆಟ್ಟಿಗೆ ಟಿಕೇಟ್ ನಿರಾಕರಿಸಿದರೆ ಸಾಮೂಹಿಕ ರಾಜೀನಾಮೆ: ಮಹಿಳಾ ಕಾಂಗ್ರೆಸ್ ಎಚ್ಚರಿಕೆ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ. ಇಲ್ಲಿ ಈ ಹಿಂದೆ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳ ಜೊತೆಗೆ ಪಕ್ಷದ ಸಂಘಟನೆಯ ಕೆಲಸವನ್ನೂ ಮಾಡಿದ್ದಾರೆ. ಈ ಭಾರಿ ಅವರಿಗೆ ಮತ್ತೆ ಸ್ಪರ್ಧಿಸಲು ಪಕ್ಷವು ಅವಕಾಶ ನೀಡಬೇಕು.

ಅವಕಾಶ ನಿರಾಕರಿಸಿದಲ್ಲಿ ಪುತ್ತೂರು ಮಹಿಳಾ ಕಾಂಗ್ರೆಸ್‍ನ ಎಲ್ಲಾ ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲಿದ್ದೇವೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್ ಎಚ್ಚರಿಕೆ ನೀಡಿದ್ದಾರೆ.

ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಈ ಹಿಂದೆಯೇ ಪಕ್ಷದ ಹೈಕಮಾಂಡ್‍ಗೆ ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ನೀಡುವಂತೆ ಮಾದ್ಯಮಗಳ ಮೂಲಕ ಮನವಿ ಮಾಡಿದ್ದೆವು. ಆದರೆ ಇದೀಗ ಪಕ್ಷವು ಬೇರೆಯವರಿಗೆ ಟಿಕೇಟ್ ನೀಡುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಶಕುಂತಳಾ ಶೆಟ್ಟಿ ಅವರು ಬಲಿಷ್ಠಗೊಳಿಸಿದ್ದಾರೆ. ಮಹಿಳೆಯರ ಏಳಿಗೆಗಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಪಕ್ಷವು ಮಹಿಳೆಯರ ಕಡೆಗಣನೆ ಮಾಡುತ್ತಿರುವ ಸೂಚನೆ ಕಂಡು ಬರುತ್ತಿದೆ. ಅನುಭವಿ ರಾಜಕಾರಣಿಯಾಗಿರುವ ಶಕುಂತಳಾ ಶೆಟ್ಟಿ ಅವರು ಕೊನೆಯ ಬಾರಿಯಾಗಿ ಈ ಬಾರಿ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ವಿಶಾಲಾಕ್ಷಿ ಬನ್ನೂರು, ವಿಲ್ಮಾ ಗೋನ್ಸಾಲ್ವಿಸ್, ಸುಧಾ ಕುಂಜತ್ತಾಯ ಮತ್ತು ಸೀತಾ ಭಟ್ ಉಪಸ್ಥಿತರಿದ್ದರು.

Vishwa News 24

Recent Posts

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ : ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ – vishwanews24

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ:  ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ ಬೆಂಗಳೂರು:…

9 minutes ago

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ – vishwanews24

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು…

21 minutes ago

ಉಡುಪಿ : ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಉಚಿತ ತರಭೇತಿ ಕಾರ್ಯಗಾರ – vishwanews24

ಉಡುಪಿ : ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಉಚಿತ ತರಭೇತಿ ಕಾರ್ಯಗಾರ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಸಿವಿಲ್ ಪೋಲಿಸ್ ಕಾನ್ಸ್ಟೇಬಲ್ 3395…

34 minutes ago

ಕಾರ್ಕಳ : ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಆರೋಪಿ ಸೌಮ್ಯ ಶೆಟ್ಟಿ ಜಾಮೀನು ನಿರಾಕರಿಸಿದ ಹೈಕೋರ್ಟ್‌ – vishwanews24

ಕಾರ್ಕಳ : ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಆರೋಪಿ ಸೌಮ್ಯ ಶೆಟ್ಟಿ ಜಾಮೀನು ನಿರಾಕರಿಸಿದ ಹೈಕೋರ್ಟ್‌ ಉಡುಪಿ : ಕಳೆದ…

51 minutes ago

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ ‘ಲೈಟ್’ ದರದಲ್ಲಿ ಸಿಗಲಿದೆ  ಭರ್ಜರಿ ಲಾಭ -vishwanews24

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ 'ಲೈಟ್' ದರದಲ್ಲಿ ಸಿಗಲಿದೆ  ಭರ್ಜರಿ ಲಾಭ ನವದೆಹಲಿ: ಭಾರತದ ಪ್ರಮುಖ ವಿಮಾನಯಾನ…

1 hour ago

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ – vishwanews24

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ ಉಡುಪಿ : ಮಲಬಾರ್ ಗೋಲ್ಡ್…

1 hour ago