ಪುತ್ತೂರು ಹಿಂದೂ ಜಾಗರಣ ವೇದಿಕೆ ಮುಖಂಡನ ಹತ್ಯೆ ಪ್ರಕರಣ : ಮೂವರ ಬಂಧನ -Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ಸೆ.3 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪ್ಯ ಎಂಬಲ್ಲಿ ನಡೆದ ಅರ್ಯಾಪು ಮೇರ್ಲ ನಿವಾಸಿ ,ಪುತ್ತೂರು ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಅವರ ಕೊಲೆ ನಡೆದಿದ್ದು ಸಂಬಂಧಿಸಿದಂತೆ ಪೋಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಪ್ಯ ಠಾಣೆಯ ಮುಂಭಾಗದಲ್ಲಿ ಗಣೇಶೋತ್ಸವ ಪೆಂಡಲ್ ಎದುರಲ್ಲೇ ಮಧ್ಯಾರಾತ್ರಿ ಯಕ್ಷಗಾನ ನಡೆಯುತಿದ್ದು ಸಾರ್ವಜನಿಕರ ಎದುರೇ ಕಾರ್ತಿಕ್ ಗೆ ಚೂರಿ ಇರಿದು ಕೊಲೆ ಮಾಡಲಾಗಿತ್ತು.

ಕೊಲೆ ನಡೆಸಿದ ಪ್ರಮುಖ ಆರೋಪಿ,ಉಳ್ಳಾಲ ಠಾಣೆಯಲ್ಲಿ ರೌಡಿ ಶೀಟರ್ ಮಂಗಳೂರು ಉಳ್ಳಾಲಬೈಲು ನಿವಾಸಿ ಪ್ರೀತೇಶ್ (28 ವರ್ಷ), ಪುತ್ತೂರು ಆರ್ಯಾಪು ಗ್ರಾಮದ ಚರಣ್‌ (26 ವರ್ಷ), ಈತನ ಸಹೋದರ ಕಿರಣ್ (36 ವರ್ಷ) ಎಂಬವರುಗಳನ್ನು ಇಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್ ಸುವರ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಅಶ್ರಯ ನೀಡಿದ ಮೇರೆಗೆ ಮಂಗಳೂರು ಅತ್ತಾವರ ನಿವಾಸಿ ಸ್ಡೀವನ್ ಮೊಂತೆರೋ ಎಂಬಾತನನ್ನು ಪೊಲೀಸರು ಬಂಧಿಸಿರುತ್ತಾರೆ..

ಕೊಲೆಯ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಪೋಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೊಲೆ ಯಾವಾ ಉದ್ದೇಶಕ್ಕೆ ನಡೆದಿದೆ ಎನ್ನುವ ಬಗ್ಗೆ ಪೋಲೀಸರು ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ.

ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಗಣೇಶೊತ್ಸವ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಸ್ಥಳೀಯರಾದ ಚರಣ್ ರಾಜ್, ಕಿರಣ್ ಮತ್ತು ಪ್ರೀತೇಶ್ ಎಂಬವರು ಚೂರಿಯಿಂದ ಇರಿದು ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆಗೈಯ್ದಿದ್ದಾರೆ. ಬಳಿಕ, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು.