ಪೊಲೀಸ್ ಮೆಸ್ನಲ್ಲಿ ಕಳಪೆ ಆಹಾರ – ನಮಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ; ರಸ್ತೆಯಲ್ಲೇ ಕಣ್ಣೀರಾಕಿದ ಕಾನ್ಸ್ಟೇಬಲ್ – ವಿಡಿಯೋ ವೈರಲ್ – Vishwanews24
ಪೊಲೀಸ್ ಮೆಸ್ನಲ್ಲಿ ಕಳಪೆ ಆಹಾರ – ನಮಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ; ರಸ್ತೆಯಲ್ಲೇ
ಕಣ್ಣೀರಾಕಿದ ಕಾನ್ಸ್ಟೇಬಲ್ – ವಿಡಿಯೋ ವೈರಲ್
ಲಕ್ನೋ: ಪೊಲೀಸ್ ಪೇದೆಯೊಬ್ಬರು ಪೊಲೀಸ್ ಮೆಸ್ನಲ್ಲಿ ನೀಡಲಾದ ಆಹಾರ ಗುಣಮಟ್ಟದ್ದಲ್ಲ ಎಂದು ರಸ್ತೆಯ ಮೇಲೆ ನಿಂತು ಗಳಗಳನೇ ಅಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉತ್ತರಪ್ರದೇಶದ ಕಾನ್ಸ್ಟೇಬಲ್ನನ್ನು ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಮನೋಜ್ ಕುಮಾರ್ ರೊಟ್ಟಿ, ದಾಲ್ ಹಾಗೂ ಅನ್ನವನ್ನು ತಟ್ಟೆಯನ್ನು ಹಿಡಿದು ಈ ಊಟವನ್ನು ಪ್ರಾಣಿಗಳು ಸಹ ತಿನ್ನುವುದಿಲ್ಲ ಎಂದು ರಸ್ತೆಯಲ್ಲಿ ಅಳುತ್ತಿದ್ದಾರೆ. ಅಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಮನೋಜ್ ಕುಮಾರ್ನನ್ನು ಮತ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಜೊತೆಗೆ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
'सरकार हमसे 12-12 घंटे काम कराती है और बदले में ऐसा खाना देती है'
◆फिरोजाबाद मुख्यालय में तैनात UP पुलिस के सिपाही मनोज कुमार ने रो रो कर सुनाई अपनी व्यथा@firozabadpolice @Uppolice pic.twitter.com/c2lWBbcTSg
— News24 (@news24tvchannel) August 10, 2022
ಆಹಾರದ ಬಗ್ಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೇ ನನ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದಾರಿಹೋಕರ ಬಳಿ ಮನೋಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ಪೌಷ್ಟಿಕ ಆಹಾರ ನೀಡಲು ರಾಜ್ಯಸರ್ಕಾರ ಭತ್ಯೆ ನೀಡುತ್ತಿದೆ ಎಂದು ಯೋಗಿ ಆದಿತ್ಯನಾಥ್ ಈ ಹಿಂದೆ ಘೋಷಿಸಿದ್ದರು. ಆದರೂ ನಮಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ನಾವು ಸರಿಯಾದ ಆಹಾರವನ್ನು ಪಡೆಯದಿದ್ದರೆ, ಸರಿಯಾಗಿ ಕೆಲಸ ನಿರ್ವಹಿಸಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೈತರ ಗಮನಕ್ಕೆ : ಕಿಸಾನ್ ಸಮ್ಮಾನ್ ನಿಧಿಯ ಪರಿಹಾರಕ್ಕಾಗಿ ಆ. 15 ರೊಳಗೆ ಇ-ಕೆವೈಸಿ ಕಡ್ಡಾಯ – Vishwanews24
