ಪ್ರತಿಭಟನೆಯ ನೆಪದಲ್ಲಿ ಕೋವಿಡ್ ನಿಯಮ,ಸೆಕ್ಷನ್144 ಉಲ್ಲಘಿಸಿದ ಕಾಂಗ್ರೆಸ್ ! ಮೂಕ‌ ಪ್ರೇಕ್ಷಕರಾದರೇ ಅಧಿಕಾರಿಗಳು..?

Featured, ಉಡುಪಿ

ಪ್ರತಿಭಟನೆಯ ನೆಪದಲ್ಲಿ ಕೋವಿಡ್ ನಿಯಮ,ಸೆಕ್ಷನ್144 ಉಲ್ಲಘಿಸಿದ ಕಾಂಗ್ರೆಸ್ ! ಮೂಕ‌ ಪ್ರೇಕ್ಷಕರಾದರೇ ಅಧಿಕಾರಿಗಳು..?

ಕಾಪು : ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಕೋವಿಡ್ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದು, ಅಧಿಕಾರಿಗಳು ಮೂಕ ಪ್ರೇಕ್ಷರಾದ ಘಟನೆ ಶನಿವಾರ ನಡೆದಿದೆ.

ಕೆಪಿಸಿಸಿ ನಿರ್ದೆಶನದಂತೆ ಡೀಸೆಲ್‌ – ಪೆಟ್ರೋಲ್ ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೋವಿಡ್ ನಿಯಮದ ಸಾಮಾಜಿಕ ಅಂತರ ಉಲ್ಲಂಘಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು‌ ಮುಖಂಡರು ಕಾಪು ಪೆಟ್ರೋಲ್ ಬಂಕ್ ಮುಂಭಾಗ ಕೇಕ್ ಕತ್ತರಿಸಿ ಪ್ರತಿಭಟನೆ ನಡೆಸಿದರು.

ನೂರಾರು ಮಂದಿ ಗುಂಪಾಗಿ ಸೇರಿಕೊಂಡು ಪೆಟ್ರೋಲ್ ಬಂಕಿನಲ್ಲಿ ದರ ಏರಿಕೆಯ ನೆಪದಲ್ಲಿ ಪ್ರತಿಭಟನೆ ನಡೆಸಿದರೆ ಕೋವಿಡ್ ನಿಯಮ ಅನ್ವಯವಾಗುವುದಿಲ್ಲವೇ…?ಸಣ್ಣಪುಟ್ಟ ವಿಚಾರಕ್ಕೆ ಕೋವಿಡ್ ನಿಯಮ ಉಲ್ಲಂಘನೆ ಯ ಬಗ್ಗೆ ಕೇಸು ದಾಖಲಿಸುವ ಅಧಿಕಾರಿಗಳಿಗೆ ಈ ಪ್ರತಿಭಟನೆ ಮರೆಮಾಚಿ ಹೋಯಿತೆ..? ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ನೂರಾರು ಮಂದಿ ಗುಂಪಾಗಿ ಸೇರಲು ಅವಕಾಶ ಇದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಾನೂನು ಉಲ್ಲಂಘಿಸಿದ ಜನರಿಂದ ದಂಡ ವಸೂಲಿ ಮಾಡಲು ಹೇಳುವ ಜಿಲ್ಲಾಧಿಕಾರಿ, ತಹಶಿಲ್ದಾರ್,ಈ ಬಗ್ಗೆ ಮೌನ ಮುರಿದು ದಂಡ ವಿಧಿಸುವರೇ ಎಂಬುದು ಕಾದು ನೋಡಬೇಕಿದೆ.
ಬ್ಯೂರೋ ರಿಪೋರ್ಟ್ – ವಿಶ್ವನ್ಯೂಸ್24