ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವನ್ನು ನಾಶ ಮಾಡುತ್ತಿದ್ದಾರೆ : ರಾಹುಲ್​ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ಜೈಪುರ: ಅರ್ಥ ವ್ಯವಸ್ಥೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಯಾದ ಜ್ಞಾನವಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಹಳೆಯ ಮಾನದಂಡಗಳನ್ನು ಉಪಯೋಗಿಸುತ್ತಿರುವುದರಿಂದ ಭಾರತದ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ಶೇ 2.5ರ ಮಂದಗತಿಯ ಬೆಳವಣಿಗೆಯಲ್ಲಿ ಸಾಗುತ್ತಿದೆ. ಈ ಮೂಲಕ ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವನ್ನು ನಾಶ ಮಾಡುತ್ತಿದ್ದಾರೆ ಎಂದು ರಾಹುಲ್​​ ಗಾಂಧಿ ಆರೋಪಿಸಿದ್ದಾರೆ.

ಯುಪಿಎ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 9 ರಷ್ಟಿತ್ತು. ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತಿತ್ತು ಎಂದಿರುವ ರಾಹುಲ್​, ಬಹುಶಃ ಪ್ರಧಾನಿ ಮೋದಿ ಆರ್ಥಶಾಸ್ತ್ರ ಅಧ್ಯಯನ ಮಾಡದೇ ಇರಬಹುದು ಅಥವಾ ಅರ್ಥ  ಮಾಡಿಕೊಳ್ಳದೇ ಇರಬಹುದು, ಇದರಿಂದಲೇ ಆರ್ಥಿಕತೆ ಮಂದಗತಿಯಲ್ಲಿದೆ ಎಂದು ದೂರಿದ್ದಾರೆ.

ಪ್ರಧಾನಿ ಮೋದಿಗೆ ಜಿಎಸ್​ಟಿ ಅಂದರೆ ಏನು ಎಂಬುದು ಸಹ ತಿಳಿದಿಲ್ಲ. ನೋಟ್​ ಬ್ಯಾನ್ ಮಾಡಿ ಏನು ಪ್ರಯೋಜನ ಪಡೆದರು. ನೋಟ್​ ಬ್ಯಾನ್​ನಿಂದ ಒಳ್ಳೆಯದಕ್ಕಿಂತ ತೊಂದರೆಯೇ ಹೆಚ್ಚಾಯಿತು ಎಂದರು.