ನವದೆಹಲಿ: ಪಂಜಾಬ್ನಲ್ಲಿ ಪ್ರಧಾನಮಂತ್ರಿಗಳ ಭೇಟಿ ವೇಳೆ ನಡೆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಪ್ರಧಾನಿ ಮೋದಿ ಬಳಿ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳೊಂದಿಗೆ ನಿನ್ನೆ ಸಂಜೆ ನಡೆಸಿದ ವರ್ಚುವಲ್ ಸಭೆಯಲ್ಲಿ, ಪಾಲ್ಗೊಂಡಿದ್ದ ಮುಖ್ಯಮಂತ್ರಿ ಚನ್ನಿ ಜನವರಿ 5 ರಂದು ತಮ್ಮ ರಾಜ್ಯದಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ವಿಷಾದಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಶಾಯರಿ (ಕವಿತೆ)ಯೊಂದನ್ನು ಹೇಳಿದರು. ” ಗೌರವಾನ್ವಿತ ಪ್ರಧಾನಿ ಮೋದಿ ಜೀ. ನೀವು ಪಂಜಾಬ್‌ಗೆ ಬಂದಿದ್ದೀರಿ, ನಿಮ್ಮ ಭೇಟಿಯ ವೇಳೆ ನಡೆದ ಘಟನೆಗೆ ನಾವು ವಿಷಾದಿಸುತ್ತೇವೆ. ನಾನು ನಿಮಗಾಗಿ ಒಂದು ಶಾಯರಿ ಹೇಳಲು ಬಯಸುತ್ತೇನೆ. ‘ತುಮ್ ಸಲಾಮತ್ ರಹೋ ಖಯಾಮತ್ ತಕ್, ಔರ್ ಖುದಾ ಕರೇ ಕಿ ಖಯಾಮತ್ ನ ಹೋ’ (ಪ್ರಪಂಚದ ಕೊನೆಯವರೆಗೂ ಸುರಕ್ಷಿತವಾಗಿರಿ, ಜಗತ್ತು ಅಂತ್ಯಗೊಳ್ಳಲು ಬಿಡಬೇಡಿ)‘ ಎಂದು ಚರಂಜಿತ್ ಸಿಂಗ್ ಚನ್ನಿ ಹೇಳಿದರು.
ಪಂಜಾಬ್ ನಲ್ಲಿ ರೈತರ ಪ್ರತಿಭಟನೆಯ ಕಾರಣ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿತ್ತು.
ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ, ಸಮಾವೇಶ ಉದ್ದೇಶಿಸಿ ಮಾತನಾಡಲು ಫಿರೋಜ್‌ಪುರಕ್ಕೆ ತೆರಳುತ್ತಿದ್ದಾಗ ರೈತರು ಅವರು ತೆರಳುತ್ತಿದ್ದ ಮಾರ್ಗವನ್ನು ತಡೆದರು. ಇದರಿಂದ ಪ್ರಧಾನಿ ಬೆಂಗಾವಲು ವಾಪಸ್ಸು ತೆರಳಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಮಾವೇಶ ರದ್ದುಪಡಿಸಲಾಗಿತ್ತು.
ಮೋದಿ ಭೇಟಿಯ ವೇಳೆ ಉಂಟಾದ ಭದ್ರತಾ ಲೋಪ ರಾಜಕೀಯ ವಿವಾದವಾಗಿ ಪರಿಣಮಿಸಿದೆ. ಇದೀಗ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಗುರುವಾರ ನಡೆದ ಕೋವಿಡ್ ಕುರಿತ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಚನ್ನಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…
ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…
ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…
ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…
ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…
ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ - ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ…