ಪ್ರಯಾಣದ ವೇಳೆ ಹೆರಿಗೆ ನೋವು ; ಬಸ್ಸನ್ನು ನೇರವಾಗಿ ಆಸ್ಪತ್ರೆ ಬಳಿ ತಂದು ನಿಲ್ಲಿಸಿದ ಚಾಲಕ – ಬಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ – vishwanews24
ಪ್ರಯಾಣದ ವೇಳೆ ಹೆರಿಗೆ ನೋವು ; ಬಸ್ಸನ್ನು ನೇರವಾಗಿ ಆಸ್ಪತ್ರೆ ಬಳಿ ತಂದು ನಿಲ್ಲಿಸಿದ ಚಾಲಕ – ಬಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಬಸ್ನಲ್ಲಿ ಚಲಿಸುತ್ತಿದ್ದ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೊನೆಗೆ ಡ್ರೈವರ್ ಬಸ್ಸನ್ನು ನೇರವಾಗಿ ಆಸ್ಪತ್ರೆ ಬಳಿ ತಂದು ನಿಲ್ಲಿಸಿದ ಘಟನೆ ದೃಶ್ಯ ಸಮೇತ ವೈರಲ್ ಆಗಿದೆ. ಕೇರಳದ ತ್ರಿಶೂರ್ನಿಂದ ಕೋಝಿಕ್ಕೋಡ್ಗೆ ತೆರಳುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ. ಡ್ರೈವರ್ ಮಹಾತ್ಕಾರ್ಯದಿಂದ ಮಹಿಳೆ ಬಸ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಬಸ್ ಪೆರಮಂಗಲಂ ಪ್ರದೇಶವನ್ನು ದಾಟಿದಂತೆ 37 ವರ್ಷದ ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ತಿಳಿದಂತೆ ಬಸ್ ಚಾಲಕ ಬಸ್ ಅನ್ನು ತ್ರಿಶೂರು ಕಡೆಗೆ ತಿರುಗಿಸಿದ್ದಾರೆ. ಅಲ್ಲಿನ ಅಮಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅದಕ್ಕೂ ಮುನ್ನ ಆಸ್ಪತ್ರೆಯ ಸಿಬ್ಬಂದಿಗೆ ವಿಚಾರ ತಿಳಿಸಲಾಗಿದೆ. ಬಸ್ ಆಸ್ಪತ್ರೆಯನ್ನು ತಲುಪುವ ಮೊದಲೇ ಸಿಬ್ಬಂದಿಗಳು ಮತ್ತು ವೈದ್ಯರು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.
ಪ್ರಜ್ವಲ್ರನ್ನು ಏರ್ಪೋರ್ಟ್ನಲ್ಲೇ ವಶಕ್ಕೆ ಪಡೆಯಲು ಈಗಾಗಲೇ ವಾರೆಂಟ್ ಜಾರಿಯಾಗಿದೆ : ಪರಮೇಶ್ವರ್ – vishwanews24
ಬಸ್ ಆಸ್ಪತ್ರೆ ಬಳಿ ಬಂದಂತೆ ಮಹಿಳೆ ವೈದ್ಯರ ಸಹಾಯದಲ್ಲಿ ಬಸ್ನಲ್ಲೇ ಹೆರಿಗೆಯಾಗಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
Pregnant passenger went into labor on a moving bus. Sending well wishes to the new mom & major kudos to anyone who assisted.
#HeroesOnTheRoad pic.twitter.com/YeKVqfvMcI— SafetyFirst (@SafetyOverSpeed) May 29, 2024
ಇನ್ನು ಮಹಿಳೆಯ ಹೆರಿಗೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ತಾಯಿ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಬಸ್ ಚಾಲಕ ಬಸ್ ಅನ್ನು ಆಸ್ಪತ್ರೆಗೆ ಬಳಿ ಚಲಾಯಿಸಿಕೊಂಡು ಬರುವ, ಮಹಿಳೆ ಹೆಣ್ಣು ಮಗುವಿನ ಜನ್ಮ ನೀಡಿದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ದೃಶ್ಯವನ್ನು ಕಂಡು ಚಾಲಕ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಗೆ ನೆಟ್ಟಿಗರು ಧನ್ಯವಾದ ಹೇಳಿದ್ದಾರೆ.
ಬ್ರಹ್ಮಾವರ: ಲಂಚ ಸ್ವೀಕರಿಸುತ್ತಿದ್ದ ಉಪ್ಪೂರು ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ – vishwanews24
