Featured

ಫೆ.7 ರಿಂದ ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ‘ಪವರ್ ಪರ್ಬ’ – vishwanews24

ಫೆ.7 ರಿಂದ ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ‘ಪವರ್ ಪರ್ಬ’

ಉಡುಪಿ: ಉಡುಪಿಯ ಮಹಿಳಾ ಉದ್ದಿಮೆದಾರರ ಸಂಘಟನೆ ‘ಪವರ್’ ವತಿಯಿಂದ ಮಹಿಳಾ ಉದ್ಯಮಿಗಳ ಉತ್ಪನ್ನಗಳು ಹಾಗೂ ಕೌಶಲ್ಯಗಳಿಗೆ ವೇದಿಕೆಯಾದ ‘ಪವರ್ ಪರ್ಬ’ ಇದೇ ಫೆ. 7, 8 ಮತ್ತು 9ರಂದು ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳು, ಅವರ ಸಂಸ್ಥೆಯ ಸೇವೆ, ಕೌಶಲ್ಯ, ಪಾಂಡಿತ್ಯವನ್ನು ಗ್ರಾಹಕರೆದುರು ಪ್ರದರ್ಶಿಸಿ ಅವರನ್ನು ಒಗ್ಗೂಡಿಸುವುದು ಪವರ್ ಪರ್ಬದ ಕಲ್ಪನೆಯಾಗಿದೆ ಎಂದರು.

ಫೆ. 7ರಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಪವರ್ ಪರ್ಬಕ್ಕೆ ಚಾಲನೆ ನೀಡಲಿದ್ದಾರೆ. ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಮ್‌ಎಸ್‌ಎಮ್‌ಇ ಜಂಟಿ ನಿರ್ದೇಶಕ ಕೆ. ಸಾಕ್ರೊಟೀಸ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಕೌಶಲಾಭಿವೃದ್ದಿ ಮಳಿಗೆಯನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಪವರ್ ಪರ್ಬದ ಸಂಯೋಜಕಿ ಸುಗುಣಾ ಸುವರ್ಣ ಮಾತನಾಡಿ, ಕೇಂದ್ರ ಸರಕಾರದ ಪಿಎಂಎಸ್ ಸ್ಕೀಮ್ ಆಫ್ ಎಂಎಸ್‌ಎಂಇ ಸಹಯೋಗದೊಂದಿಗೆ ಈ ಪವರ್ ಪರ್ಬವನ್ನು ಆಯೋಜಿಸಲಾಗುತ್ತಿದ್ದು, ಒಟ್ಟು 150ಕ್ಕೂ ಅಧಿಕ ಮಳಿಗೆಗಳನ್ನು ಮಹಿಳಾ ಉದ್ಯಮಿಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 60 ಮಳಿಗೆಗಳು ಪಿಎಂಎಸ್ ಸ್ಕೀಮ್ ಆಫ್ ಎಂಎಸ್‌ಎಂಇ ಮಳಿಗೆಗಳಾಗಿರುತ್ತವೆ ಎಂದರು.

ಆಭರಣ, ಆಹಾರ, ಚಿತ್ರಕಲೆ, ಕರಕೌಶಲ್ಯ, ವಸ್ತ್ರ ವಿನ್ಯಾಸ, ಗೃಹಾಲಂಕಾರ, ಸೌಂದರ್ಯ ವರ್ಧಕಗಳು, ಕ್ರಿಯಾತ್ಮಕ ವಸ್ತುಗಳು ಮೊದಲಾದ ವಸ್ತುಗಳ ಮಳಿಗೆ ಇರಲಿದೆ. ಈ ಪವರ್ ಪರ್ಬದ ಪ್ರಚಾರದ ಭಾಗವಾಗಿ ಫೆ.5ರಂದು ಸಂಜೆ 4.30ಕ್ಕೆ ರಜತಾದ್ರಿ ಮಣಿಪಾಲದಿಂದ ಉಡುಪಿಯವರೆಗೆ ಕಾರು ಮತ್ತು ಬೈಕ್‌ ರ‌್ಯಾಲಿ ಆಯೋಜಿಸಲಾಗಿದೆ. ಪವರ್ ನ ಸದಸ್ಯರು ಮತ್ತು ಪ್ರದರ್ಶಕರು ಈ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಿಯಾ ಕಾಮತ್, ಕೋಶಾಧಿಕಾರಿ ಪುಷ್ಪಾ ಜಿ.ರಾವ್, ನೋಂದಣಿ ಸಂಯೋಜಕಿ ಸುಪ್ರಿಯಾ ಕಾಮತ್, ಸ್ಥಾಪಕ ಅಧ್ಯಕ್ಷ ರೇಣು ಜಯರಾಮ್, ನಿಕಟ ಪೂರ್ವ ಅಧ್ಯಕ್ಷರಾದ ತಾರಾ ತಿಮ್ಮಯ್ಯ, ಸುವರ್ಷಾ ಮಿಂಚ್, ಶೃತಿ ಶೆಣೈ ಉಪಸ್ಥಿತರಿದ್ದರು.

Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

9 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

13 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

13 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

14 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

14 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

15 hours ago