ನವದೆಹಲಿ,: ಫ್ರಾನ್ಸ್‌ನ ಡಾಸೊ ಏವಿಯೇಶನ್ ಕಂಪನಿ ನಿರ್ಮಿಸಿರುವ ಮೂರು ರಫೇಲ್ ಯುದ್ಧ ವಿಮಾನಗಳು ಬುಧವಾರದಂದು ಭಾರತಕ್ಕೆ ಆಗಮಿಸಿದ್ದು, ಗುಜರಾತ್‌ನ ಜಾಮ್‌ನಗರ್ ವಾಯುನೆಲೆಗೆ ಬಂದಿಳಿದಿವೆ.
ಫ್ರಾನ್ಸ್‌ನಿಂದ 7 ಸಾವಿರ ಕಿ.ಮೀ ಕ್ರಮಿಸಿ 3ನೇ ಹಂತದಲ್ಲಿ ಭಾರತಕ್ಕೆ ತಲುಪಿರುವ ಯುದ್ಧ ವಿಮಾನಗಳು ವಾಯುಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿವೆ.
ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಸೇನೆಯು, “ಮೂರನೇ ಹಂತದಲ್ಲಿ ಮೂರು ರಫೇಲ್ ಯುದ್ಧವಿಮಾನಗಳು ಐಎಎಫ್ ವಾಯುನೆಲೆಗೆ ಬಂದಿಳಿದಿದ್ದು, ಅವುಗಳು ತಡೆರಹಿತವಾಗಿ 7000 ಕಿ.ಮೀ ದೂರ ಕ್ರಮಿಸಿ ಇಲ್ಲಿಗೆ ತಲುಪಿವೆ. ಯುಎಇಯಲ್ಲಿರುವ ಫ್ರಾನ್ಸ್‌ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಒಂದು ಬಾರಿ ನಿಲುಗಡೆ ಮಾಡಲಾಗಿದೆ. ಯುಎಇ ವಾಯುಪಡೆಯು ಒದಗಿಸಿದ ಟ್ಯಾಂಕರ್(ಇಂಧನ) ಬೆಂಬಲವನ್ನು ಭಾರತೀಯ ವಾಯುಪಡೆ ಪ್ರಶಂಸಿಸುತ್ತದೆ” ಎಂದು ಹೇಳಿದೆ.
ಇನ್ನು ಫ್ರಾನ್ಸ್‌ನ ಡಾಸೊ ಏವಿಯೇಶನ್ ಕಂಪನಿ ನಿರ್ಮಿಸಿರುವ ರಫೇಲ್ ಯುದ್ಧವಿಮಾನಗಳನ್ನು ಕಳೆದ ವರ್ಷ ಸೆಪ್ಟಂಬರ್ 10ರಂದು ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳು ನವೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದು, ಇದೀಗ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಬಂದಿಳಿದಿವೆ.
ಕುಂದಾಪುರ : ಯುವ ಪತ್ರಕರ್ತ ಯೋಗೀಶ್ ಕುಂಭಾಶಿಯವರಿಗೆ ರಾಜ್ಯ ಮಟ್ಟದ ಭೀಮ ರತ್ನ ಪ್ರಶಸ್ತಿ -Vishwanews24
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…