ಕುಂದಾಪುರ : ಯುವ ಪತ್ರಕರ್ತ ಯೋಗೀಶ್ ಕುಂಭಾಶಿಯವರಿಗೆ ರಾಜ್ಯ ಮಟ್ಟದ ಭೀಮ ರತ್ನ ಪ್ರಶಸ್ತಿ -Vishwanews24
ಕುಂದಾಪುರ : ಯುವ ಪತ್ರಕರ್ತ ಯೋಗೀಶ್ ಕುಂಭಾಶಿಯವರಿಗೆ ರಾಜ್ಯ ಮಟ್ಟದ ಭೀಮ ರತ್ನ ಪ್ರಶಸ್ತಿ -Vishwanews24
ಕುಂದಾಪುರ: ಕನ್ನಡಿಗ ವರ್ಲ್ಡ್ ಹಾಗೂ ಮುಕ್ತ ಚಾನೆಲ್ನ ಕುಂದಾಪುರ ವರದಿಗಾರ, ಯುವ ಪತ್ರಕರ್ತ ಯೋಗೀಶ್ ಕುಂಭಾಶಿಯವರಿಗೆ ರಾಜ್ಯ ಮಟ್ಟದ ‘ಭೀಮ ರತ್ನ’ ಪ್ರಶಸ್ತಿ ದೊರಕಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ರಾಜ್ಯ ಸಮಿತಿ ಬೆಂಗಳೂರು ಇವರು ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಕುಂದಾಪುರದ ಕಲಾ ಮಂದಿರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಭೀಮ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಬೆಂಗಳೂರು ನಗರ ಸಾಮಾಜಿಕ ದಲಿತ ಹೋರಾಟಗಾರ ಜಿ.ಎ.ನಾಗಪ್ಪ, ಪಡುಕೋಣೆ ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಪ್ಪ ಶೆಟ್ಟಿ, ಸಾಮಾಜಿಕ ಹೋರಾಟಗಾರರಾದ ಪ್ರಭಾಕರ ಮೂಡುಬಿದಿರೆ, ನಜೀರ್ ಬೆಳ್ವಾಯಿ ಅವರಿಗೆ ಭೀಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತ ಯೋಗೀಶ್ ಕುಂಭಾಶಿಯವರು ಕುಂದಾಪುರ ಭಾಗದಲ್ಲಿನ ಬಡವರ, ಸಾಮಾನ್ಯ ಜನರ ಸಮಸ್ಯೆಗಳನ್ನು ತಮ್ಮ ವಾಹಿನಿಯಲ್ಲಿ ಬೆಳಕು ಚೆಲ್ಲುವ ಮೂಲಕ ಒಂದಷ್ಟು ಬಡ ಕುಟುಂಬಗಳ ಸಮಸ್ಯೆಗೆ ಮುಕ್ತಿ ಕೊಡಿಸಿದ್ದಾರೆ. ಹೀಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಪ್ರತಿಕ್ರಿಯೆ ನೀಡಿದ್ದಾರೆ.
